ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಟಿಟಿ ವೇದಿಕೆಯಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಕಡ್ಡಾಯ: ಕೇಂದ್ರ ಸಚಿವ ಬಘೇಲ್‌

Published 25 ಜುಲೈ 2023, 13:54 IST
Last Updated 25 ಜುಲೈ 2023, 13:54 IST
ಅಕ್ಷರ ಗಾತ್ರ

ನವದೆಹಲಿ: ಒಟಿಟಿ ವೇದಿಕೆಗಳ ಕಾರ್ಯಕ್ರಮಗಳಲ್ಲಿ ತಂಬಾಕು ಉತ್ಪನ್ನಗಳನ್ನು ಪ್ರದರ್ಶಿಸುವ ವೇಳೆ ಪರದೆಯ ಕೆಳಭಾಗದಲ್ಲಿ ತಂಬಾಕು ವಿರೋಧಿ ಎಚ್ಚರಿಕೆ ಸಂದೇಶವನ್ನು ಪ್ರದರ್ಶಿಸುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ರಾಜ್ಯ ಖಾತೆ ಸಚಿವ ಎಸ್‌.ಪಿ. ಸಿಂಗ್‌ ಬಘೇಲ್‌ ಮಂಗಳವಾರ ರಾಜ್ಯಸಭೆಗೆ ತಿಳಿಸಿದ್ದಾರೆ.

ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ತಿದ್ದುಪಡಿ ನಿಯಮ 2023ರ ಅನ್ವಯ ಸರ್ಕಾರವು ಒಟಿಟಿ ವೇದಿಕೆಗಳಿಗೆ ಈ ಸೂಚನೆ ನೀಡಿದೆ ಎಂದೂ ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಈ ತಿದ್ದುಪಡಿ ನಿಯಮದ ಪ್ರಕಾರ ಒಟಿಟಿ ವೇದಿಕೆಗಳಲ್ಲಿ ಕಾರ್ಯಕ್ರಮದ ಆರಂಭ ಮತ್ತು ಮಧ್ಯದಲ್ಲಿ ಕನಿಷ್ಠ 30 ಸೆಕೆಂಡ್ ತಂಬಾಕು ವಿರೋಧಿ ಎಚ್ಚರಿಕೆ ನೀಡುವುದು ಕಡ್ಡಾಯ. ಕಾರ್ಯಕ್ರಮದಲ್ಲಿ ತಂಬಾಕು ಉತ್ಪನ್ನ ಅಥವಾ ಬಳಕೆಯ ದೃಶ್ಯಗಳಿದ್ದಾಗಲೂ ಪರದೆಯ ಕೆಳಭಾಗದಲ್ಲಿ ಎಚ್ಚರಿಕೆ ಸಂದೇಶವನ್ನು ಪ್ರಕಟಿಸಬೇಕು ಎಂದೂ ಸಚಿವರು ತಿಳಿಸಿದ್ದಾರೆ.

ಕಾರ್ಯಕ್ರಮದ ಆರಂಭ ಮತ್ತು ಮಧ್ಯದಲ್ಲಿ ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮದ ಕುರಿತು ಕನಿಷ್ಠ 20 ಸೆಕೆಂಡ್‌ಗಳ ಆಡಿಯೊ-ದೃಶ್ಯ ಸಂದೇಶವನ್ನು ಬಿತ್ತರಿಸಬೇಕು ಎಂದೂ ಬಘೇಲ್‌ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT