ಇಂಫಾಲ್ : ಮಣಿಪುರದ ಇಂಫಾಲ್ ಪಶ್ಚಿಮ ಜಿಲ್ಲೆಯ ಯುಮ್ನಮ್ ಲೈಕೈ ಪ್ರದೇಶದಲ್ಲಿರುವ ಸಚಿವ ಖೇಮಚಂದ್ ಯುಮ್ನಮ್ ಅವರ ನಿವಾಸದ ಬಳಿ ಗ್ರೆನೇಡ್ ಸ್ಪೋಟಗೊಂಡು ಸಿಆರ್‌ಪಿಎಫ್ ಯೋಧ ಸೇರಿ ಇಬ್ಬರು ಗಾಯಗೊಂಡಿದ್ದಾರೆ.

ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಗ್ರೆನೇಡ್ ಎಸೆದು ಪರಾರಿಯಾಗಿದ್ದು, ಅದು ಸಚಿವರ ನಿವಾಸದ ಗೇಟ್‌ನ ಸಮೀಪ ಸ್ಫೋಟಗೊಂಡಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಸಿಆರ್‌ಪಿಎಫ್ ಯೋಧ ದಿನೇಶ್ ಚಂದ್ರದಾಸ್ ಅವರ ಕೈಗೆ ಹಾಗೂ ಮಹಿಳೆಯೊಬ್ಬರ ಕಾಲಿಗೆ ಗಾಯಗಳಾಗಿವೆ ಎಂದು ವಿವರಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿರುವ ಮಣಿಪುರ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು, ದಾಳಿಯನ್ನು ಖಂಡಿಸಿದ್ದಾರೆ. ಖೇಮಚಂದ್ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.