ಗುವಾಹಟಿ: ಗಲಭೆಗಳು ನಡೆಯುತ್ತಿರುವ ಮಣಿಪುರದ ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಜಾಯ್‌ಕಿಶನ್‌ಗೆ ಸೇರಿದ ತೋಟದ ಮನೆಯಿಂದ ಶಸ್ತ್ರಾಸ್ತ್ರ ಕದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಪೊಲೀಸರು ಹಾಗೂ ಒಬ್ಬ ನಾಗರಿಕನನ್ನು ಬಂಧಿಸಲಾಗಿದೆ.

‘ಇನ್ಸಾಸ್’ ಮಾದರಿ ನಾಲ್ಕು ರೈಫಲ್ಸ್, ನಾಲ್ಕು ಮ್ಯಾಗಜೀನ್, 80 ಗುಂಡುಗಳನ್ನು ಮಂಗಳವಾರ ರಾತ್ರಿ ದೋಚಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಇಂಫಾಲ ಪಶ್ಚಿಮ ಜಿಲ್ಲೆಯ ಸೆಕ್ತಾ ಅವಾಂಗ್ ಲೈಕೈ ಪ್ರದೇಶದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಬಳಿಕ ಐದು ಮಂದಿಯನ್ನು ಬಂಧಿಸಿ, ಮೂರು ಇನ್ಸಾಸ್ ಮಾದರಿಯ ರೈಫಲ್ಸ್, ಮೂರು ಮ್ಯಾಗಜೀನ್, ಒಂದು ಕ್ಯಾಲಿಬರ್ ರೈಫಲ್ಸ್, ಒಂದು ಎಲ್‌ಎಂಜಿ ರೈಫಲ್ಸ್ ಹಾಗೂ ಮ್ಯಾಗಜೀನ್, ಎರಡು ಎ.ಕೆ.–56 ರೈಫಲ್ಸ್ ಹಾಗೂ ಮ್ಯಾಗಜೀನ್, 130 ಗುಂಡು ಸೇರಿದಂತೆ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ಶಸ್ತ್ರಾಸ್ತ್ರ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳವಾರ ರಾತ್ರಿಯೇ ಕಾರ್ಯಾಚರಣೆ ನಡೆಸಿದ್ದರು. ಘಟನೆ ನಡೆದ ವೇಳೆ ಶಾಸಕರು ಸ್ಥಳದಲ್ಲಿ ಇರಲಿಲ್ಲ. ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರ ಕಳವು ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.