ಇಂಫಾಲ್: ಶಂಕಿತ ಉಗ್ರರು ಸೋಮವಾರ ಮಧ್ಯಾಹ್ನ ಇಲ್ಲಿನ ಕಾಂಗ್ಪೋಕ್ಪಿ ಜಿಲ್ಲೆಯಲ್ಲಿ ಹಲವು ಮನೆ ಹಾಗೂ ಫಾರ್ಮ್ಹೌಸ್ಗಳಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಾಜ್ಯದಲ್ಲಿ ಮತ್ತೆ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕುಕಿ ಸಮುದಾಯವು ಬಹುಸಂಖ್ಯಾತರಾಗಿರುವ ಕೆ.ಸೊಂಗುಲುಂಗ್ ಗ್ರಾಮದಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಷ್ಟದ ಅಂದಾಜು ಇನ್ನಷ್ಟೇ ತಿಳಿಯಬೇಕಿದೆ. ಅಸ್ಸಾಂ ರೈಫಲ್ಸ್ ಸೇರಿದಂತೆ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ.

ದಾಳಿಗೆ ಸಂಬಂಧಿಸಿದಂತೆ ಝೆಲಿಯಾಗ್ರೊಂಗ್ ಯುನೈಟೆಡ್ ಫ್ರಂಟ್ ಹೊಣೆ ಹೊತ್ತು ಹೊತ್ತುಕೊಂಡಿದೆ. ಮನೆ ಹಾಗೂ ಫಾರ್ಮ್ಹೌಸ್ಗಳನ್ನು ಗಸಗಸೆ ಅಕ್ರಮ ಬೆಳೆಗಾರರು ಬಳಸಿಕೊಳ್ಳುತ್ತಿದ್ದರು ಎಂದು ತಿಳಿಸಿದೆ.