ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಪುರ|ಐಆರ್‌ಬಿ ಶಿಬಿರದಿಂದ ಶಸ್ತ್ರಾಸ್ತ್ರಗಳ ಲೂಟಿ: ಆರು ಮಂದಿ ಬಂಧನ

Published 15 ಫೆಬ್ರುವರಿ 2024, 7:34 IST
Last Updated 15 ಫೆಬ್ರುವರಿ 2024, 7:34 IST
ಅಕ್ಷರ ಗಾತ್ರ

ಇಂಫಾಲ್: ಮಣಿಪುರದ ಇಂಫಾಲ್ ಪೂರ್ವ ಜಿಲ್ಲೆಯ ಚಿಂಗಾರೆಲ್‌ನ ಇಂಡಿಯಾ ರಿಸರ್ವ್ ಬೆಟಾಲಿಯನ್ ಶಿಬಿರದಿಂದ ಶಸ್ತ್ರಾಸ್ತ್ರಗಳನ್ನು ಲೂಟಿ ಮಾಡಿದ್ದ ಆರು ಮಂದಿಯನ್ನು ಪೊಲೀಸರು ಇಂದು ( ಗುರುವಾರ) ಬಂಧಿಸಿದ್ದಾರೆ.

ಆರೋಪಿಗಳಿಂದ ನಾಲ್ಕು ಇನ್ಸಾಸ್ ರೈಫಲ್‌ಗಳು, ಒಂದು ಎಕೆ ಘಟಕ್, ಎಸ್‌ಎಲ್‌ಆರ್‌ನ ಎರಡು ಮ್ಯಾಗಜೀನ್‌ಗಳು ಸೇರಿದಂತೆ 9ಎಂಎಂ ಮದ್ದುಗುಂಡುಗಳ 16 ಪೆಟ್ಟಿಗೆಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

'ಇದೇ ಫೆಬ್ರುವರಿ 13ರಂದು ಪೂರ್ವ ಇಂಫಾಲ್‌ನ ಚಿಂಗಾರೆಲ್‌ನ 5ನೇ ಐಆರ್‌ಬಿಯಲ್ಲಿ ಗುಂಪೊಂದು ಶಸ್ತ್ರಾಸ್ತ್ರ ಲೂಟಿ ಮಾಡಿದ್ದ ಪ್ರಕರಣ ಸಂಬಂಧ 6 ಜನರನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು. ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ’ ಎಂದು ಎಕ್ಸ್ ಪೋಸ್ಟ್ ಮೂಲಕ ಪೊಲೀಸರು ಮಾಹಿತಿ ನೀಡಿದ್ದಾರೆ.

ಶಸ್ತ್ರಾಸ್ತ್ರಗಳನ್ನು ಎಲ್ಲಿ ವಶಪಡಿಸಿಕೊಳ್ಳಲಾಯಿತು ಮತ್ತು ಆರೋಪಿಗಳನ್ನು ಎಲ್ಲಿ ಬಂಧಿಸಲಾಗಿದೆ ಎಂಬ ಬಗ್ಗೆ ಪೊಲಿಸರು ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT