ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅರುಣಾಚಲಪ್ರದೇಶ | ಆಳವಾದ ಕಂದಕಕ್ಕೆ ಉರುಳಿದ ವಾಹನ: ಮೂವರು ಸೇನಾಧಿಕಾರಿಗಳ ಸಾವು

Published 28 ಆಗಸ್ಟ್ 2024, 5:01 IST
Last Updated 28 ಆಗಸ್ಟ್ 2024, 5:01 IST
ಅಕ್ಷರ ಗಾತ್ರ

ಇಟಾನಗರ(ಅರುಣಾಚಲಪ್ರದೇಶ): ಸೇನಾ ಟ್ರಕ್ ರಸ್ತೆಯಿಂದ ಜಾರಿ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಸೇನಾಧಿಕಾರಿಗಳು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಅರುಣಾಚಲಪ್ರದೇಶದ ಸುಬಾನ್ಸಿರಿ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಪಿ ಗ್ರಾಮದ ಬಳಿಯ ಟ್ರಾನ್ಸ್ ಅರುಣಾಚಲ ಹೆದ್ದಾರಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ಮೃತರನ್ನು ಹವಾಲ್ದಾರ್ ಮಖತ್ ಸಿಂಗ್, ನಾಯ್ಕ್ ಮುಖೇಶ್ ಕುಮಾರ್, ಗ್ರೆನೇಡಿಯರ್ ಆಶಿಶ್ ಕುಮಾರ್ ಎಂದು ಗುರುತಿಸಲಾಗಿದೆ.

ಅಪಘಾತಕ್ಕೀಡಾದ ಸೇನಾ ಟ್ರಕ್ ಸಿಬ್ಬಂದಿಯನ್ನು ಸಾಗಿಸುವ ಬೆಂಗಾವಲು ಪಡೆಯ ಭಾಗವಾಗಿತ್ತು. ಟ್ರಕ್ ಸುಬಾನ್ಸಿರಿಯ ಜಿಲ್ಲಾ ಕೇಂದ್ರ ಪಟ್ಟಣವಾದ ದಪೋರಿಜೋದಿಂದ ಲೆಪರಾಡಾ ಜಿಲ್ಲೆಯ ಬಸರ್‌ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರು ಮೃತದೇಹಗಳನ್ನು ಹೊರತೆಗೆಯಲು ಮತ್ತು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ನೆರವು ನೀಡಿದ್ದಾರೆ.

‘ದೇಶಕ್ಕಾಗಿ ಬಹುದೊಡ್ಡ ತ್ಯಾಗ ಮಾಡಿದ ಹವಾಲ್ದಾರ್ ಮಖತ್ ಸಿಂಗ್, ನಾಯ್ಕ್ ಮುಖೇಶ್ ಕುಮಾರ್, ಗ್ರೆನೇಡಿಯರ್ ಆಶಿಶ್ ಕುಮಾರ್ ಸೇವೆಯನ್ನು ಸೇನೆ ಸ್ಮರಿಸುತ್ತದೆ. ಭಾರತೀಯ ಸೇನೆಯ ಅವರ ಕುಟುಂಬಗಳ ಜೊತೆಗಿರುತ್ತದೆ’ಎಂದು ಸೇನೆಯ ಈಶಾನ್ಯ ಕಮಾಂಡ್ ಎಕ್ಸ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಮುಖ್ಯಮಂತ್ರಿ ಪೆಮಾ ಖಂಡು ಸಂತಾಪ ಸೂಚಿಸಿದ್ದಾರೆ. ‘ಅಪಘಾತದಲ್ಲಿ ಮೂವರು ಯೋಧರು ಮೃತಪಟ್ಟಿರುವುದು ಅತ್ಯಂತ ದುಃಖ ನೀಡಿದೆ. ರಾಷ್ಟ್ರಕ್ಕೆ ಅವರ ಸೇವೆ ಮತ್ತು ಅತ್ಯುನ್ನತ ತ್ಯಾಗವನ್ನು ಅತ್ಯಂತ ಗೌರವಗಳೊಂದಿಗೆ ಸ್ಮರಿಸಲಾಗುವುದು’ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT