ಪ್ರಯಾಗರಾಜ್: ತನ್ನ ಮತ್ತು ಹೆಂಡತಿಯ ಖಾಸಗಿ ವಿಡಿಯೊವನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯ ವಿರುದ್ಧದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಲು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ನಿರಾಕರಿಸಿದ್ದು, ಮದುವೆಯು ಗಂಡನಿಗೆ ತನ್ನ ಹೆಂಡತಿಯ ಮೇಲೆ ಮಾಲೀಕತ್ವ ಅಥವಾ ನಿಯಂತ್ರಣವನ್ನು ನೀಡುವುದಿಲ್ಲ ಎಂದು ಹೇಳಿದೆ. ಅಲ್ಲದೆ, ಮದುವೆಯು ಅವಳ ಸ್ವಾಯತ್ತತೆ ಅಥವಾ ಗೌಪ್ಯತೆಯ ಹಕ್ಕನ್ನು ದುರ್ಬಲಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಆರೋಪಪಟ್ಟಿಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ವಿನೋದ್ ದಿವಾಕರ್, ‘ಫೇಸ್ಬುಕ್ನಲ್ಲಿ ಖಾಸಗಿ ವಿಡಿಯೊವನ್ನು ಅಪ್ಲೋಡ್ ಮಾಡುವ ಮೂಲಕ, ಅರ್ಜಿದಾರರು (ಪತಿ) ವೈವಾಹಿಕ ಸಂಬಂಧದ ಪಾವಿತ್ರ್ಯವನ್ನು ಗಂಭೀರವಾಗಿ ಉಲ್ಲಂಘಿಸಿದ್ದಾರೆ. ಪತಿಯು ತನ್ನ ಹೆಂಡತಿ ತನ್ನಲ್ಲಿ ಇಟ್ಟಿರುವ ನಂಬಿಕೆ ಮತ್ತು ವಿಶ್ವಾಸವನ್ನು ವಿಶೇಷವಾಗಿ ಅವರ ಆತ್ಮೀಯ ಸಂಬಂಧದ ಸಂದರ್ಭದಲ್ಲಿ ಗೌರವಿಸಬೇಕು’ಎಂದು ಹೇಳಿದ್ದಾರೆ.

‘ಅಂತಹ ಖಾಸಗಿ ವಿಷಯವನ್ನು ಹಂಚಿಕೊಳ್ಳುವ ಕ್ರಿಯೆಯು ಗಂಡ ಮತ್ತು ಹೆಂಡತಿಯ ನಡುವಿನ ಬಾಂಧವ್ಯವನ್ನು ವ್ಯಾಖ್ಯಾನಿಸುವ ಅಂತರ್ಗತ ಗೌಪ್ಯತೆಯ ಉಲ್ಲಂಘನೆಗೆ ಸಮನಾಗಿರುತ್ತದೆ. ಈ ನಂಬಿಕೆಯ ದ್ರೋಹವು ವೈವಾಹಿಕ ಸಂಬಂಧದ ಅಡಿಪಾಯವನ್ನೇ ಅಲುಗಾಡಿಸುತ್ತದೆ’ಎಂದು ನ್ಯಾಯಾಲಯವು ಹೇಳಿದೆ.

‘ಹೆಂಡತಿ ಗಂಡನ ಅಡಿಯಾಳಲ್ಲ, ಬದಲಾಗಿ ತನ್ನದೇ ಆದ ಹಕ್ಕುಗಳು, ಆಸೆಗಳನ್ನು ಹೊಂದಿರುವ ಸ್ವತಂತ್ರ ವ್ಯಕ್ತಿ. ಆಕೆಯ ದೈಹಿಕ ಸ್ವಾಯತ್ತತೆ ಮತ್ತು ಗೌಪ್ಯತೆಯನ್ನು ಗೌರವಿಸುವುದು ಕೇವಲ ಕಾನೂನು ಬಾಧ್ಯತೆಯಲ್ಲ, ನೈಜ ಸಮಾನ ಸಂಬಂಧವನ್ನು ಬೆಳೆಸುವಲ್ಲಿ ನೈತಿಕ ಕಡ್ಡಾಯವಾಗಿದೆ’ಎಂದು ನ್ಯಾಯಾಲಯ ಹೇಳಿದೆ.

ಮಿರ್ಜಾಪುರ ಜಿಲ್ಲೆಯಲ್ಲಿ ಪ್ರದುಮ್ನ್ ಯಾದವ್ ಎಂಬವರ ಪತ್ನಿ ಐಟಿ ಕಾಯ್ದೆಯ ಸೆಕ್ಷನ್ 67ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದು, ಯಾದವ್ ತಮಗೆ ಅರಿವಿಲ್ಲದೆ ಮತ್ತು ಒಪ್ಪಿಗೆಯಿಲ್ಲದೆ ತಮ್ಮ ನಡುವಿನ ಆತ್ಮೀಯ ಕ್ಷಣಗಳ ದೃಶ್ಯಗಳನ್ನು ತನ್ನ ಮೊಬೈಲ್ನಲ್ಲಿ ಚಿತ್ರೀಕರಿಸಿ ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದಲ್ಲದೆ, ನಂತರ ನನ್ನ ಸೋದರಸಂಬಂಧಿ ಮತ್ತು ಇತರ ಸಹ-ಗ್ರಾಮಸ್ಥರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

ಅರ್ಜಿದಾರರು, ದೂರುದಾರರ ಕಾನೂನುಬದ್ಧ ವಿವಾಹಿತ ಪತಿ. ಆದ್ದರಿಂದ, ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ. ಪತಿ ಮತ್ತು ಪತ್ನಿ ರಾಜಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಹೆಚ್ಚುವರಿ ಸರ್ಕಾರಿ ವಕೀಲರು, ದೂರುದಾರರು ಅರ್ಜಿದಾರರ ಕಾನೂನುಬದ್ಧ ವಿವಾಹಿತ ಪತ್ನಿಯಾಗಿದ್ದರೂ, ಅರ್ಜಿದಾರರಿಗೆ ಆಕೆಯ ಅಶ್ಲೀಲ ವಿಡಿಯೊವನ್ನು ಸೆರೆಹಿಡಿದು ಸೋದರಸಂಬಂಧಿ ಮತ್ತು ಇತರ ಸಹ ಗ್ರಾಮಸ್ಥರ ಜೊತೆ ಹಂಚಿಕೊಳ್ಳುವ ಹಕ್ಕಿಲ್ಲ ಎಂಬ ವಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.