ಜೈಪುರ: ಮದುವೆಯಾಗುವ ಆಸೆ ತೋರಿಸಿ 25ಕ್ಕೂ ಅಧಿಕ ಜನರಿಂದ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ, ಪರಾರಿಯಾಗಿದ್ದ ಯುವತಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾಳೆ.

ಭೋಪಾಲ್ ಮೂಲದ ಅನುರಾಧ(23) ಎಂಬುವವರು ಆರೋಪಿಯಾಗಿದ್ದು, ಸವಾಯಿ ಮಾಧೋಪುರ್ ಪೊಲೀಸರು ಮೇ.18ರಂದು ಬಂಧಿಸಿದ್ದಾರೆ.

ಆರೋಪಿಯು ನಕಲಿ ಮದುವೆ ಮಾಡಿಕೊಂಡ ನಂತರ ನಗದು, ಬೆಲೆಬಾಳುವ ವಸ್ತುಗಳು ಹಾಗೂ ಮೊಬೈಲ್ ಪೋನ್ ಜೊತೆಗೆ ಪರಾರಿಯಾಗಿರುವ ಕುರಿತು ಹಲವು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದರು.

ವಿಷ್ಣು ಗುಪ್ತಾ ಎಂಬುವವರು ದಾಖಲಿಸಿದ್ದ ಎಫ್ಐಆರ್ ಆಧಾರದ ಮೇಲೆ ಪ್ರಕರಣವನ್ನು ಕೈಗೆತ್ತಿಕೊಳ್ಳಲಾಗಿತ್ತು, ವಿವಿಧ ರಾಜ್ಯಗಳಲ್ಲಿ ಇದೇ ರೀತಿಯ ಹಲವು ಘಟನೆಗಳಲ್ಲಿ ಈ ಯುವತಿಯು ಭಾಗಿಯಾಗಿರುವುದು ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಭೋಪಾಲ್ನಲ್ಲಿ ನಕಲಿ ಮದುವೆ ಮಾಡಿಸುವ ಜಾಲವೊಂದು ಬೆಳಕಿಗೆ ಬಂದಿದ್ದು, ಅದರ ಕುರಿತು ಹೆಚ್ಚಿನ ತನಿಖೆ ಮಾಡಲಾಗುತ್ತಿದೆ ಎಂದರು.
.Video | ‘ಬೂಕರ್’ ಶಾರ್ಟ್ಲಿಸ್ಟ್ಗೆ ಕನ್ನಡದ ಬಾನು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.