ಡೆಹ್ರಾಡೂನ್: ಉತ್ತರಾಖಂಡದ ಉಧಮ್ ಸಿಂಗ್ ನಗರ ಜಿಲ್ಲೆಯ ನಾನಕ್ಮಟ್ಟಾ ಪ್ರದೇಶದಲ್ಲಿ ಎಂಡಿಎಂಎ ಮಾದಕ ದ್ರವ್ಯ ತಯಾರಿಸುತ್ತಿದ್ದ ಕಾರ್ಖಾನೆಯನ್ನು ಪೊಲೀಸರು ಪತ್ತೆಹಚ್ಚಿ, ಅದನ್ನು ನಿರ್ವಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಸ್ಟಿಎಫ್ನ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಯ ಕುಮಾವೂನ್ ಘಟಕ ಮತ್ತು ಪಿಥೋರಗಢ, ಚಂಪಾವತ್ ಹಾಗೂ ಉಧಮ್ ಸಿಂಗ್ ನಗರ ಪೊಲೀಸರ ಜಂಟಿ ತಂಡವು ಈ ಬಂಧನವನ್ನು ಮಾಡಿದೆ ಎಂದು ಉತ್ತರಾಖಂಡ ಪೊಲೀಸ್ ಮಹಾನಿರ್ದೇಶಕ ದೀಪಮ್ ಸೇಠ್ ಇಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.

ಈ ಸಂಬಂಧ ಮುಂಬೈನಿಂದ ನೇಪಾಳದವರೆಗೆ ಹರಡಿರುವ ಅಂತರರಾಷ್ಟ್ರೀಯ ಗ್ಯಾಂಗ್ ಅನ್ನು ಪತ್ತೆಹಚ್ಚಿದ್ದು, ಎಂಡಿಎಂಎ ತಯಾರಿಸಲು ಬಳಸಲಾಗುವ ನಿಷೇಧಿತ ರಾಸಾಯನಿಕಗಳ ದೊಡ್ಡ ಸರಕನ್ನು ವಶಪಡಿಸಿಕೊಂಡಿದೆ.

ಸಾಹ್ನಿ ನರ್ಸರಿ ತಿರಹಾದಲ್ಲಿನ ಕಾರ್ಖಾನೆಯ ಹಿಂದಿನ ವ್ಯಕ್ತಿ ಕುನಾಲ್ ರಾಮ್ ಕೊಹ್ಲಿ ಎಂದು ಹೇಳಲಾಗಿದ್ದು, ದಾಳಿಯಲ್ಲಿ ಆತನನ್ನೂ ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಖಾನೆಯಿಂದ 126 ಲೀಟರ್ ರಾಸಾಯನಿಕಗಳು, 28 ಕೆ.ಜಿ ಕೆಮಿಕಲ್ ಪೌಡರ್ ಮತ್ತು 7.41 ಗ್ರಾಂ ತಯಾರಾದ ಎಂಡಿಎಂಎಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇಠ್ ಹೇಳಿದ್ದಾರೆ.

ಈ ವರ್ಷ ಮೇ 31ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಇಬ್ಬರು ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರನ್ನು ಬಂಧಿಸಲಾಗಿದ್ದು, ಅವರಿಂದ 11 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿತ್ತು ಎಂದು ಉತ್ತರಾಖಂಡ ಎಸ್ಟಿಎಫ್ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನವನೀತ್ ಸಿಂಗ್ ಭುಲ್ಲರ್ ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಉತ್ತರಾಖಂಡ-ನೇಪಾಳ ಗಡಿಯಲ್ಲಿರುವ ಪಿಥೋರಗಢ ಜಿಲ್ಲೆಯ ಥಾಲ್ ಪ್ರದೇಶದಲ್ಲಿ ಮೋನು ಗುಪ್ತಾ ಮತ್ತು ಕುನಾಲ್ ಕೊಹ್ಲಿ ನಡೆಸುತ್ತಿರುವ ಎಂಡಿಎಂಎ ಕಾರ್ಖಾನೆಯ ಬಗ್ಗೆ ಅವರು ಮಾಹಿತಿ ನೀಡಿದ್ದರು. ಅಲ್ಲಿಂದ ಅವರು ಮುಂಬೈ ಸೇರಿದಂತೆ ಇತರ ರಾಜ್ಯಗಳಿಗೆ ಮಾದಕವಸ್ತುಗಳನ್ನು ಪೂರೈಸುತ್ತಾರೆ ಎಂದೂ ಭುಲ್ಲರ್ ಹೇಳಿದ್ದರು.

ಈ ಮಾಹಿತಿಯ ಆಧಾರದ ಮೇರೆಗೆ, ಥಾಣೆ ಮತ್ತು ಪಿಥೋರಗಢ ಪೊಲೀಸರು ಜೂನ್ 26 ರಂದು ಥಾಲ್ನಲ್ಲಿ ಕೋಳಿ ಸಾಕಣೆ ಕೇಂದ್ರದ ಸೋಗಿನಲ್ಲಿ ನಡೆಸುತ್ತಿದ್ದ ಕಾರ್ಖಾನೆಯ ಮೇಲೆ ದಾಳಿ ನಡೆಸಿ ರಾಸಾಯನಿಕಗಳನ್ನು ವಶಪಡಿಸಿಕೊಂಡರು,

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.