ಸೋಮವಾರ, 6 ಅಕ್ಟೋಬರ್ 2025
×
ADVERTISEMENT
ADVERTISEMENT

ಸಾಧನೆಗಳ ‘ಶಿಖರ’ ಈ ಪಂಜಾಬ್‌ ಬಾಲಕಿ: ಎವರೆಸ್ಟ್ ಏರಿದ ಸಾನ್ವಿ

Published : 27 ಆಗಸ್ಟ್ 2023, 19:04 IST
Last Updated : 27 ಆಗಸ್ಟ್ 2023, 19:04 IST
ಫಾಲೋ ಮಾಡಿ
Comments
ರೊಹ್ಟಾಂಗ್‌ನಲ್ಲಿ 18 ಕಿ.ಮೀ. ಚಾರಣ
‘ನಾವು ಪ್ರತಿ ವರ್ಷ ಕೇದಾರನಾಥ ಮತ್ತು ಮಾತಾ ವೈಷ್ಣೋ ದೇವಿ ದೇಗುಲಗಳಿಗೆ ಭೇಟಿ ನೀಡುತ್ತೇವೆ. ಇಂಥ ಸಮಯದಲ್ಲಿಯೇ ಮಗಳ ಸಾಮರ್ಥ್ಯದ ಬಗ್ಗೆ ಅರಿವಾದದ್ದು. ಅಲ್ಲದೇ, ನನ್ನ ಬಹುತೇಕ ಕೆಲಸವು ಪರ್ವತ ಪ್ರದೇಶಗಳಲ್ಲಿಯೇ ನಡೆಯುತ್ತದೆ. ಕೆಲಸದ ಸ್ಥಳಗಳಿಗೆ ಸಾನ್ವಿ ನನ್ನ ಜೊತೆ ಯಾವಾಗಲೂ ಬರುತ್ತಿದ್ದಳು. ಒಂದು ಬಾರಿಯಂತೂ ರೋಹ್ಟಾಂಗ್‌ನಲ್ಲಿ ನನ್ನ ಜೊತೆ ಸುಮಾರು 18 ಕಿ.ಮೀ. ಚಾರಣ ಮಾಡಿದ್ದಳು. ಈ ಘಟನೆ ಬಳಿಕ, ಪರ್ವತಾರೋಹಣ ಕ್ಷೇತ್ರದಲ್ಲಿ ನನ್ನ ಮಗಳು ಸಾಧನೆ ಮಾಡಬಹುದು ಎಂದು ನನಗೆ ಎನ್ನಿಸಿತು’ ಎಂದರು. ‘ಚಾರಣ ಮತ್ತು ಪರ್ವತಾರೋಹಣದ ತಯಾರಿಗಾಗಿ ಸೈಕ್ಲಿಂಗ್‌, ಯೋಗ ಹಾಗೂ ಇತರ ವ್ಯಾಯಾಮಗಳನ್ನು ಸಾನ್ವಿ ಮಾಡುತ್ತಾಳೆ’ ಎಂದು ಅವರು ತಿಳಿಸಿದರು.
ರಾಜ್ಯ ಪ್ರಶಸ್ತಿಯ ಗರಿ
ಪರ್ವತಾರೋಹಣದಲ್ಲಿ ಸಾನ್ವಿ ಮಾಡಿರುವ ಸಾಧನೆ ಗುರುತಿಸಿ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಈಕೆಗೆ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT