ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ: ಅಪಹರಣವಾಗಿದ್ದ ಬಾಲಕಿ ಪತ್ತೆ

Published 28 ನವೆಂಬರ್ 2023, 13:05 IST
Last Updated 28 ನವೆಂಬರ್ 2023, 13:05 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದಲ್ಲಿ ಸೋಮವಾರ ಮಧ್ಯಾಹ್ನ ಅಪಹರಣವಾಗಿದ್ದ 6 ವರ್ಷದ ಬಾಲಕಿಯನ್ನು ಕೊಲ್ಲಂ ನಗರದ ಸಾರ್ವಜನಿಕ ಪ್ರದೇಶದಲ್ಲಿ ಮಂಗಳವಾರ ಮಧ್ಯಾಹ್ನ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. 

ಕೊಲ್ಲಂ ನಗರದ ಆಶ್ರಮವೊಂದರಲ್ಲಿ ಬಾಲಕಿ ಇರುವ ಬಗ್ಗೆ ಸ್ಥಳೀಯ ನಾಗರಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಆಶ್ರಮದಿಂದ ಬಾಲಕಿಯ ಮನೆ ಸುಮಾರು 25 ಕಿ.ಮೀ ದೂರವಿದೆ ಎನ್ನಲಾಗಿದೆ. 

ಬಾಲಕಿಯನ್ನು ಅಪಹರಣ ಮಾಡಿದ್ದ ಗ್ಯಾಂಗ್ ಅನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ. 

ರೆಜಿ ಜಾನ್ ಮತ್ತು ಸಿಜಿ ಎಂಬ ದಂಪತಿಯ ಮಗಳಾದ ಅಬಿಗೇಲ್ ಸಾರಾ ರೆಜಿ (6) ಸೋಮವಾರ ಅಣ್ಣನ ಜೊತೆ ಟ್ಯೂಷನ್‌ಗೆ ತೆರಳುವಾಗ ನಾಲ್ವರು ದುಷ್ಕರ್ಮಿಗಳು, ಆಕೆಯನ್ನು ಅಪಹರಿಸಿದ್ದರು. ಆಕೆಯ ಬಿಡುಗಡೆಗೆ ₹10 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದರು. ಆದರೆ, ತಮ್ಮನ್ನು ಹಿಡಿಯಲು ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂಬ ಕಾರಣಕ್ಕೆ ದುಷ್ಕರ್ಮಿಗಳು ಬಾಲಕಿಯನ್ನು ಬಿಟ್ಟು ಪರಾರಿಯಾಗಿರಬಹುದು ಎನ್ನಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT