ಚೆನ್ನೈ: ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಸ್ವೀಕಾರಾರ್ಹವಲ್ಲ. ಸಮಾಜವನ್ನು ವಿಭಜಿಸುವ ಗಲಭೆಕೋರರನ್ನು ನಿಗ್ರಹಿಸುವ ತುರ್ತು ಕರ್ತವ್ಯವಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಗುರುವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಕ್ರಿಸ್ಮಸ್ ಆಚರಣೆಯಲ್ಲಿ ಭಾಗವಹಿಸಿದ್ದರೂ, ಬಹುಸಂಖ್ಯಾತರ ಸೋಗಿನಲ್ಲಿ ಕೆಲವು ಬಲಪಂಥೀಯ ಹಿಂಸಾತ್ಮಕ ಗುಂಪುಗಳು ದಾಳಿ ಮತ್ತು ಗಲಭೆಗಳಲ್ಲಿ ತೊಡಗಿರುವುದು ದೇಶಕ್ಕೆ ‘ಗೊಂದಲದ ಸಂದೇಶ’ವನ್ನು ರವಾನಿಸುತ್ತದೆ ಎಂದು ಸ್ಟಾಲಿನ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಭಾಷಣಗಳ ಪ್ರಮಾಣದಲ್ಲಿ ಶೇ 74ರಷ್ಟು ಹೆಚ್ಚಳವಾಗಿದೆ ಎಂದು ವರದಿಯಾಗಿದ್ದು, ಮುಂದೆ ಇದು ಗಂಭೀರ ಅಪಾಯವನ್ನು ತರುತ್ತದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.