ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಶುಕ್ರವಾರ ಮಾತುಕತೆ ನಡೆಸಿದರು.

ಭಾರತ–ರಷ್ಯಾ ನಡುವಣ ಕಾರ್ಯತಂತ್ರದ ಪಾಲುದಾರಿಕೆಯ ವೃದ್ಧಿ ಮತ್ತಿತರ ವಿಚಾರಗಳ ಬಗ್ಗೆ ಉಭಯ ದೇಶಗಳ ನಾಯಕರು ಚರ್ಚೆ ನಡೆಸಿದರು.

ಉಕ್ರೇನ್ನೊಂದಿಗಿನ ಯುದ್ಧದ ಬಗ್ಗೆ ಪುಟಿನ್ ಅವರು ಸಂಕ್ಷಿಪ್ತವಾಗಿ ವಿವರಿಸಿದರು. ಉಭಯ ದೇಶಗಳ ನಡುವಣ ವ್ಯಾಜ್ಯವನ್ನು ಶಾಂತಿಯುತ ಮಾರ್ಗದ ಮೂಲಕವೇ ಪರಿಹರಿಸಿಕೊಳ್ಳಲು ಭಾರತ ಒತ್ತಾಯಿಸುತ್ತದೆ ಎಂದು ಮೋದಿ ಅವರು ತಿಳಿಸಿದರು.

ರಷ್ಯಾದಿಂದ ಕಚ್ಚಾತೈಲ ಖರೀದಿಸುತ್ತಿರುವ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಒತ್ತಡ ಹೇರುತ್ತಿರುವ ಮಧ್ಯೆಯೇ ಮೋದಿ–ಪುಟಿನ್ ಮಾತುಕತೆ ನಡೆಸಿರುವುದು ಮಹತ್ವ ಪಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ‘ಎಕ್ಸ್’ನಲ್ಲಿ, ‘ಸ್ನೇಹಿತ ಪುಟಿನ್ ಅವರೊಂದಿಗೆ ಅತ್ಯುತ್ತಮವಾದ ಮತ್ತು ವಿವರವಾದ ಸಂವಾದ ನಡೆಸಿದೆ. ಉಕ್ರೇನ್ನ ಇತ್ತೀಚಿನ ಬೆಳವಣಿಗೆ ಬಗ್ಗೆ ತಿಳಿಸಿದ ಅವರಿಗೆ ಧನ್ಯವಾದ. ಉಭಯ ದೇಶಗಳ ನಡುವಣ ದ್ವಿಪಕ್ಷೀಯ ಸಂಬಂಧ ಬಗ್ಗೆಯೂ ಮಾತುಕತೆ ನಡೆಸಿದೆವು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.