ಬೆಂಗಳೂರು: ಎನ್‌ಡಿಎ ಬಗ್ಗೆ ನೆನಪಿರದ ಮೋದಿಗೆ ನಮ್ಮ ಒಗ್ಗಟ್ಟು ನೋಡಿ ಇದೀಗ ಸಭೆ ಕರೆದಿದ್ದಾರೆ. ಎನ್‌ಡಿಎನಲ್ಲಿ ಇಷ್ಟೊಂದು ಪಕ್ಷಗಳಿವೆಯೇ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಚ್ಚರಿ ವ್ಯಕ್ತಪಡಿಸಿದರು.
ನಮ್ಮ ಒಗ್ಗಟ್ಟು ನೋಡಿ ಪ್ರಧಾನಿ ಮೋದಿ ಬೆದರಿದ್ದಾರೆ. ಮೊದಲು ಎನ್‌ಡಿಎ ಬಗ್ಗೆ ಮೋದಿಗೆ ನೆನಪಿರಲಿಲ್ಲ
ಮೊದಲಿಗೆ ಮಾತು ಆರಂಭಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಇದು ಅತ್ಯಂತ ಪ್ರಮುಖ ಸಭೆಯಾಗಿತ್ತು. ಪ್ರಜಾಪ್ರಭುತ್ವ ರಕ್ಷಣೆಗೆ ದೇಶದ ಜನರ ರಕ್ಷಣೆಗೆ ಅತ್ಯಗತ್ಯವಾಗಿತ್ತು. ಹೀಗಾಗಿ ನಾವೆಲ್ಲ ಒಂದುಗೂಡಿದ್ದೇವೆ, ಒಂದೇ ಧ್ವನಿಯಲ್ಲಿ ನಿರ್ಣಯ ಕೈಗೊಂಡಿದ್ದೇವೆ ಎಂದರು.
11 ಜನರ ಸಮನ್ವಯ ಸಮಿತಿ ಮಾಡಲು ತೀರ್ಮಾನ ಮಾಡಲಾಗಿದೆ. ಮುಂದಿನ ಸಭೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆಯಲಿದೆ. ಅಲ್ಲಿ ಈ ಸಮಿತಿಯಲ್ಲಿ ಯಾರು ಯಾರು ಇರುತ್ತಾರೆ ಎಂಬುದನ್ನು ಹೇಳಲಾಗುವುದು ಎಂದು ಖರ್ಗೆ ಹೇಳಿದರು.
ವಿರೋಧ ಪಕ್ಷಗಳ ನಡುವೆ ಕೆಲವು ಕಡೆಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೂ ನಾವೆಲ್ಲಾ ಅದನ್ನು ಬದಿಗಿಟ್ಟು ದೇಶದ ಹಿತಾಸಕ್ತಿಗಾಗಿ ಒಂದಾಗಿದ್ದೇವೆ. ನಮ್ಮ ಸಭೆ ನೋಡಿ 30 ಪಕ್ಷಗಳ ಎನ್‌ಡಿಎ ಸಭೆಯನ್ನು ಪ್ರಧಾನಿ ಮೋದಿ ಕರೆದಿದ್ದಾರೆ. ಇಷ್ಟೊಂದು ಪಕ್ಷಗಳು ಎನ್‌ಡಿಎನಲ್ಲಿ ಎಲ್ಲಿವೆ? ನಿಜಕ್ಕೂ ಇದು ನನಗೆ ಗೊತ್ತಿಲ್ಲ ಎಂದು ಖರ್ಗೆ ಹೇಳಿದರು.
ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ, ಸಂವಿಧಾನ ನಾಶ ಮಾಡಲು ಹೊರಟಿದೆ. ಸ್ವಾಯತ್ತ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ವಿಪಕ್ಷಗಳ ವಿರುದ್ಧ ಆಯುಧವಾಗಿ ಬಳಸುತ್ತಿದ್ದಾರೆ. ದೇಶದ ರಕ್ಷಣೆ ನಮ್ಮ ಹೊಣೆ., ಅದೇ ನಮ್ಮ ಮೊದಲ ಆದ್ಯತೆ, ಎಲ್ಲ ಪಕ್ಷಗಳ ನಾಯಕರು ಇದಕ್ಕೆ ಸಲಹೆ ನೀಡಿದ್ದಾರೆ ಎಂದರು.
ನಮ್ಮ ಒಗ್ಗಟ್ಟು ನೋಡಿ ಪ್ರಧಾನಿ ಮೋದಿ ಬೆದರಿದ್ದಾರೆ. ಮೊದಲು ಎನ್‌ಡಿಎ ಬಗ್ಗೆ ಮೋದಿಗೆ ನೆನಪಿರಲಿಲ್ಲ. ಅವರೇ ತುಕಡೇ ತುಕಡೇ ಆಗಿದ್ದರು. ಈಗ ಅವರು ಅವೆಲ್ಲವನ್ನೂ ಜೋಡಿಸುವ ಕೆಲಸ ಮಾಡುತ್ತೇವೆ ಎಂದರು.
ಮುಂದಿನ ಸಭೆಯಲ್ಲಿ ಉಪಸಮಿತಿ ರಚನೆ ಬಗ್ಗೆ ಚರ್ಚೆ ಮಾಡುತ್ತೇವೆ. ಶೀಘ್ರದಲ್ಲೇ ಮೂರನೇ ಸಭೆಯ ದಿನಾಂಕ ಘೋಷಣೆ ಮಾಡುತ್ತಿದ್ದೇವೆ ಎಂದು ಖರ್ಗೆ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.