ನವದೆಹಲಿ:‘ಮುಂಗಾರು ವಾಡಿಕೆಯಂತೆ ಪ್ರಗತಿಯಲ್ಲಿದೆ. ಇನ್ನೆರಡು ದಿನಗಳಲ್ಲಿ ಕರ್ನಾಟಕ, ತಮಿಳುನಾಡು, ಗೋವಾ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಮತ್ತಷ್ಟು ಚುರುಕಾಗಲು ಪರಿಸ್ಥಿತಿ ಅನುಕೂಲಕರವಾಗಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ( ಐಎಂಡಿ) ಗುರುವಾರ ತಿಳಿಸಿದೆ.

‘ಮುಂಗಾರು ಪ್ರಗತಿಯಲ್ಲಿ ಯಾವುದೇ ವಿಳಂಬವಾಗಿಲ್ಲ. ಮುಂದಿನ ಎರಡು ದಿನಗಳಲ್ಲಿ ಮಹಾರಾಷ್ಟ್ರ ತಲುಪುವ ಸಾಧ್ಯತೆಯಿದ್ದು, ನಂತರದ ಎರಡು ದಿನಗಳಲ್ಲಿ ಮುಂಬೈ ಮಹಾನಗರವನ್ನೂ ಆವರಿಸುವ ಸಾಧ್ಯತೆ ಇದೆ’ ಎಂದುಐಎಂಡಿಯ ಹಿರಿಯ ವಿಜ್ಞಾನಿ ಆರ್.ಕೆ. ಜೆನಮಣಿ ಇಲ್ಲಿಸುದ್ದಿಗಾರರಿಗೆ ತಿಳಿಸಿದರು.

‘ಬಲವಾದ ಗಾಳಿ ಮತ್ತು ಮೋಡಗಳ ರಚನೆ ದಟ್ಟವಾಗುತ್ತಿದೆ. ಮುಂಗಾರು ಪ್ರಬಲವಾಗುವ ಲಕ್ಷಣಗಳಿವೆ. ಮೇ 31ರಂದು ಆರಂಭವಾದ ಮುಂಗಾರು ಜೂನ್ 7ರ ನಡುವೆ ದಕ್ಷಿಣ ಮತ್ತು ಮಧ್ಯ ಅರಬ್ಬಿ ಸಮುದ್ರ, ಕೇರಳದಾದ್ಯಂತ, ಕರ್ನಾಟಕ ಹಾಗೂ ತಮಿಳುನಾಡಿನ ಕೆಲವು ಭಾಗಗಳನ್ನು ಆವರಿಸಿತ್ತು.ಈ ಮಧ್ಯೆ ಇಡೀ ಈಶಾನ್ಯ ಭಾರತವನ್ನೂ ಆವರಿಸಿ, ಉತ್ತಮ ಮಳೆಯಾಗಿದೆ’ ಎಂದು ತಿಳಿಸಿದರು.

15ರವರೆಗೆ ಉಷ್ಣಾಂಶ ಬದಲಾವಣೆ ಇಲ್ಲ:ದೆಹಲಿ- ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್) ಮತ್ತು ವಾಯುವ್ಯ ಭಾರತದ ಇತರ ಭಾಗಗಳಲ್ಲಿವಾರಾಂತ್ಯದಲ್ಲಿ ಗರಿಷ್ಠ ತಾಪಮಾನವು ಹಂತಹಂತವಾಗಿ ಕಡಿಮೆಯಾಗಲಿದೆ. ಆದರೆ, ಜೂನ್ 15ರವರೆಗೆ ಯಾವುದೇ ದೊಡ್ಡ ಬದಲಾವಣೆಯ ಸಾಧ್ಯತೆಯಿಲ್ಲ.ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ಮತ್ತು 43 ಡಿಗ್ರಿ ಸೆಲ್ಸಿಯಸ್ ನಡುವೆ ಇರಲಿದೆಎಂದು ಐಎಂಡಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.