ನವದೆಹಲಿ: ‘ಸಂಸದರಿಗಾಗಿ ನಿರ್ಮಿಸಿರುವ ನೂತನ ವಸತಿ ಸಂಕೀರ್ಣದ ಆವರಣದಲ್ಲಿ ದೇಶದ ವಿವಿಧೆಡೆ ಆಚರಿಸುವ ಎಲ್ಲ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇಲ್ಲಿ ಸಲಹೆ ನೀಡಿದರು.

ನಾಲ್ಕು ನದಿಗಳ ಹೆಸರನ್ನು ಹೊಂದಿರುವ ಬಹುಮಹಡಿ ವಸತಿಗಳ ಸಂಕೀರ್ಣವನ್ನು ಉದ್ಘಾಟಿಸಿದ ಪ್ರಧಾನಿ, ‘ಒಂದು ವಸತಿ ಸಂಕೀರ್ಣಕ್ಕೆ ಕೋಸಿ ನದಿಯ ಹೆಸರನ್ನಿಟ್ಟಿರುವುದಕ್ಕೆ, ಕೆಲವರು ಮುಂಬರುವ ಬಿಹಾರ ವಿಧಾನಸಭಾ ಚುನಾವಣೆಯನ್ನು ತಳುಕು ಹಾಕುತ್ತಿದ್ದಾರೆ. ಹಾಗೆ ಹೇಳುತ್ತಿರುವವರು ಸಣ್ಣ ಮನಸ್ಸಿನವರು. ನದಿಯ ಹೆಸರಿಡುವ ಪದ್ಧತಿಯು ವಾಸ್ತವದಲ್ಲಿ ಜನರನ್ನು ಒಂದುಗೂಡಿಸಲಿದೆ’ ಎಂದರು.

ಸಂಸತ್ ಭವನದ ಸಮೀಪವಿರುವ ಬಾಬಾ ಖರಕ್ ಸಿಂಗ್ ಮಾರ್ಗದಲ್ಲಿರುವ ಹೊಸ ವಸತಿ ಸಂಕೀರ್ಣದಲ್ಲಿ 184 ಮನೆಗಳಿವೆ. ಉಳಿದ ಮೂರು ಬಹುಮಹಡಿ ಕಟ್ಟಡಕ್ಕೆ ಕೃಷ್ಣಾ, ಗೋದಾವರಿ, ಹೂಗ್ಲಿ ನದಿಗಳ ಹೆಸರುಗಳನ್ನು ಇಡಲಾಗಿದೆ.

‘ಸಂಸದರಿಗೆ ನಿವಾಸಗಳ ಕೊರತೆ ಬಹಳ ಹಿಂದಿನಿಂದಲೂ ಇದೆ. ಈ ಹಿಂದಿನ ಯುಪಿಎ ಆಡಳಿತದ ಅವಧಿಯಲ್ಲಿ ಯಾವುದೇ ಹೊಸ ಮನೆ ನಿರ್ಮಿಸಲಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ 350 ನೂತನ ಮನೆಗಳನ್ನು ನಿರ್ಮಿಸಿದ್ದೇವೆ’ ಎಂದು ಮೋದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.