ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶದ | ಬಿಜೆಪಿ ಮುಖಂಡನ ಹತ್ಯೆ: ಎಸ್‌ಐಟಿ ರಚನೆ

ಮಧ್ಯಪ್ರದೇಶದ ಮುಖ್ಯಮಂತ್ರಿಯ ತವರು ಜಿಲ್ಲೆ ಉಜ್ಜಯಿನಿಯಲ್ಲಿ ನಡೆದಿರುವ ಘಟನೆ
Published 27 ಜನವರಿ 2024, 14:19 IST
Last Updated 27 ಜನವರಿ 2024, 14:19 IST
ಅಕ್ಷರ ಗಾತ್ರ

ಉಜ್ಜಯಿನಿ: ಸ್ಥಳೀಯ ಬಿಜೆಪಿ ಮುಖಂಡ ಮತ್ತು ಆತನ ಪತ್ನಿಯನ್ನು ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಅವರ ನಿವಾಸದಲ್ಲಿ ಶಂಕಿತ ದರೋಡೆಕೋರರು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ ಹತ್ಯೆ ನಡೆದಿರುವುದು ಗೊತ್ತಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗುವುದು ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮೋಹನ್‌ ಯಾದವ್ ಅವರ ತವರು ಜಿಲ್ಲೆಯಲ್ಲೇ ಬಿಜೆಪಿ ಮುಖಂಡನ ಹತ್ಯೆಯಾಗಿದೆ.

‘ಉಜ್ಜಯಿನಿ ಜಿಲ್ಲೆಯ ದೇವಾಸ್‌ ರಸ್ತೆಯಲ್ಲಿರುವ ಪಿಪ್ಲೋಡಾ ಗ್ರಾಮದ ಸ್ವಗೃಹದಲ್ಲೇ ಮಾಜಿ ಸರಪಂಚರಾಗಿದ್ದ ರಾಮನಿವಾಸ್‌ ಕುಮಾವತ್ ಮತ್ತು ಅವರ ಪತ್ನಿ ಮುನ್ನಿಬಾಯಿ ಅವರನ್ನು ಹತ್ಯೆ ಮಾಡಲಾಗಿದೆ. ದುಷ್ಕರ್ಮಿಗಳು ದರೋಡೆ ನಡೆಸಲು ಮುಂದಾದಾಗ ಈ ಅಪರಾಧ ನಡೆದಿರಬಹುದು’ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗುರುಪ್ರಸಾದ್ ಪರಾಶರ್ ಶಂಕಿಸಿದ್ದಾರೆ. 

‘ಸ್ಥಳದಲ್ಲಿ ಗುಂಡಿನ ಚಕಮಕಿ ನಡೆದಿಲ್ಲ. ಮನೆಯೊಳಗಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಲಾಕರ್, ಗೋದಾಮು, ಸ್ಟೋರ್‌ ರೂಂ ಸುರಕ್ಷಿತವಾಗಿವೆ. ಸಿ.ಸಿ.ಟಿ.ವಿ ಕ್ಯಾಮೆರಾದ ಸ್ಕ್ರೀನ್‌ಗೆ ಹಾನಿಯಾಗಿದೆ. ವಿಧಿವಿಜ್ಞಾನ ತಂಡವು ಸ್ಥಳಕ್ಕೆ ಭೇಟಿ ನೀಡಿ, ಪರೀಕ್ಷೆ ನಡೆಸಿದೆ. ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಯಾವ ರೀತಿ ಹತ್ಯೆ ನಡೆದಿದೆ ಎಂಬುದು ಗೊತ್ತಾಗಲಿದೆ. ಪ್ರಕರಣದ ತನಿಖೆಗಾಗಿ ಎಸ್‌ಐಟಿ ರಚಿಸಲಾಗುವುದು’ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT