ಮಂಡ್ಲಾ, ಮಧ್ಯಪ್ರದೇಶ: ವಿದ್ಯಾರ್ಥಿಗಳಿಗೆ ಬೈಬಲ್ ಅನ್ನು ಬೋಧಿಸುತ್ತಿದ್ದ ಹಾಗೂ ಚರ್ಚ್‌ಗೆ ಕರೆದೊಯ್ಯುತ್ತಿದ್ದ ಆರೋಪದ ಮೇಲೆ ಮಧ್ಯಪ್ರದೇಶದ ಮಂಡ್ಲಾದ ಶಾಲೆಯೊಂದರ ಮುಖ್ಯೋಪಾದ್ಯಾಯರ ಮೇಲೆ ಪ್ರಕರಣ ದಾಖಲಾಗಿದ್ದು, ಹಾಸ್ಟೆಲ್‌ನ ಅಧೀಕ್ಷಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ಮವೈ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘೋರೇಘಟ್ ಪಂಚಾಯತ್ ವ್ಯಾಪ್ತಿಯಲ್ಲಿರುವ ಸೆಂಟ್ ಜೋಸೆಫ್ ಶಾಲೆಗೆ ಬಾಲ ಕಲ್ಯಾಣ ಸಮಿತಿಯ (ಮಕ್ಕಳ ಕಲ್ಯಾಣ ಸಮಿತಿ) ಕಾರ್ಯಾಧ್ಯಕ್ಷ ಯೋಗೇಶ್ ಪರಾಶರ್ ಹಾಗೂ ಇವರ ತಂಡ ಭೇಟಿ ನೀಡಿದ ನಂತರ ದೂರು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಗಳನ್ನು ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ಜಿಬಿ ಸೆಬಸ್ಟಿಯನ್ ಹಾಗೂ ಹಾಸ್ಟೆಲ್ ಅಧೀಕ್ಷಕ ಕುನ್ವರ್ ಸಿಂಗ್ ಎಂದು ಗುರುತಿಸಲಾಗಿದೆ. ಸಿಂಗ್ ಅವರನ್ನು ಗುರುವಾರ ಬಂಧಿಸಲಾಗಿದ್ದು, ಸೆಬಸ್ಟಿಯನ್ ತಲೆಮರೆಸಿಕೊಂಡಿದ್ದಾರೆ. ಬಾಲ ಕಲ್ಯಾಣ ಸಮಿತಿಯ ಸದಸ್ಯರಾದ ಓಂಕಾರ್ ಸಿಂಗ್ ಹಾಗೂ ಅನಿರಾಗ್ ಪಾಂಡೆ ಅವರು ಮಾರ್ಚ್ 4ರಂದು ಶಾಲೆ ಹಾಗೂ ಹಾಸ್ಟೆಲ್‌ಗೆ ಡಿಢೀರ್ ಭೇಟಿ ನೀಡಿದಾಗ ವಿದ್ಯಾರ್ಥಿಗಳಿಗೆ ಬೈಬಲ್ ಬೋಧಿಸುತ್ತಿದ್ದದ್ದು ಹಾಗೂ ಚರ್ಚ್‌ಗೆ ಕರೆದೊಯ್ಯುತ್ತಿದ್ದದ್ದು ಗಮನಕ್ಕೆ ಬಂದಿದೆ ಎಂದು ಮವೈ ಪೊಲೀಸ್ ಠಾಣೆಯ ಉಸ್ತುವಾರಿ ಸಂತೋಷ್ ಸಿಸೋಡಿಯಾ ಹೇಳಿದ್ದಾರೆ.