ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ನಿಲ್ದಾಣದಲ್ಲಿ ಕಿಕಿ ನೃತ್ಯ ಮಾಡಿದ್ದ ಯುವಕರಿಗೆ ಕಸ ಗುಡಿಸುವ ಶಿಕ್ಷೆ

Last Updated 9 ಆಗಸ್ಟ್ 2018, 17:29 IST
ಅಕ್ಷರ ಗಾತ್ರ

ಮುಂಬೈ: ರೈಲು ನಿಲ್ದಾಣದಲ್ಲಿ ಚಲಿಸುತ್ತಿದ್ದ ಲೋಕಲ್ ರೈಲಿನಿಂದ ಇಳಿದು ಅಪಾಯಕಾರಿ ಕಿಕಿ ನೃತ್ಯ ಮಾಡಿದ್ದ ಮೂವರು ಯುವಕರಿಗೆ ರೈಲ್ವೆ ನ್ಯಾಯಾಲಯ ಮೂರು ದಿನ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿದೆ.

ಮುಂಬೈನ ವಿರಾರ್ ನಿವಾಸಿಗಳಾದ ನಿಶಾಂತ್ ಶಾ (20), ಶ್ಯಾಂ ಶರ್ಮಾ (24) ಮತ್ತು ದೃವ ಶಾರೈಲು ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆಗೆ ಗುರಿಯಾಗಿದ್ದಾರೆ.

ಈ ಮೂವರು ಕಳೆದ ವಾರ ಚಲಿಸುತ್ತಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ್ದರು. ಈ ವಿಡಿಯೊವನ್ನು ಯುಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದರು. ಒಂದೆರಡು ದಿನಗಳಲ್ಲೇ ಇದನ್ನು 15 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ. ಹಾಗೇ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್‌ ಆಗಿತ್ತು.

ಈ ವಿಡಿಯೊ ಗಮನಿಸಿದ್ದ ರೈಲ್ವೆ ಪೊಲೀಸರು ಆ ಯುವಕರ ವಿರುದ್ಧ ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಅವರ ಪತ್ತೆಗಾಗಿ ತನಿಖೆ ನಡೆಸಿದ್ದರು. ಬುಧವಾರ ಕಿಕಿ ಡ್ಯಾನ್ಸ್ ಮಾಡಿದ್ದ ಯುವಕರನ್ನು ಬಂಧಿಸಿ ರೈಲ್ವೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಕೀಕೀ ನೃತ್ಯ ಮಾಡಿದ್ದ ಯುವಕರಿಗೆ ಈ ವಾರದಲ್ಲಿ ಮೂರು ದಿನ ನಿಲ್ದಾಣವನ್ನು ಸ್ವಚ್ಛಗೊಳಿಸುವ ಶಿಕ್ಷೆ ನೀಡಿದೆ.

ಬೆಳಗ್ಗೆ 11 ರಿಂದ 2 ಗಂಟೆ ಹಾಗೂ ಮಧ್ಯಾಹ್ನ 3 ರಿಂದ 5 ಗಂಟೆಯವರೆಗೆ ನಿಲ್ದಾಣವನ್ನು ಸ್ವಚ್ಛ ಮಾಡಬೇಕು. ಈ ವಾರ ಅವರು ನಿಲ್ದಾಣವನ್ನು ಸ್ವಚ್ಛ ಮಾಡಲಿ, ಇನ್ನು ಹೆಚ್ಚಿನ ಶಿಕ್ಷೆ ನೀಡಬೆಕೋ, ಬೇಡವೋ ಎಂಬುದನ್ನು ನ್ಯಾಯಾಲಯ ಮುಂದಿನ ವಾರ ನಿರ್ಧರಿಸಲಿದೆ ಎಂದು ಕೋರ್ಟ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT