ಮುಂಬೈ: ನವೀ ಮುಂಬೈಯ ವಾಶಿ ರೈಲು ನಿಲ್ದಾಣದಲ್ಲಿ ಬುಧವಾರ ಬೆಳಗ್ಗೆ ವ್ಯಕ್ತಿಯೊಬ್ಪರು ವಿದ್ಯುತ್‌ಚಾಲಿತರೈಲಿನ ಮೇಲಿರುವ ಕೇಬಲ್ ಮೇಲೆ ಬ್ಯಾಗ್ ಬಿಸಾಡಿದ್ದರಿಂದ ರೈಲಿಗೆ ಬೆಂಕಿ ಹತ್ತಿಕೊಂಡಿದೆ.

ಪನ್ವೇಲ್ ದಾರಿಯಾಗಿ ಸಾಗುವ ರೈಲು ವಾಶಿ ನಿಲ್ದಾಣಕ್ಕೆ ತಲುಪಿದಾಗ ಅನಾಮಿಕ ವ್ಯಕ್ತಿಯೊಬ್ಬರು ವಿದ್ಯುತ್ ರೈಲಿನ ಮೇಲಿರುವ ಕೇಬಲ್‌ಗೆ ಬ್ಯಾಗ್ ಬಿಸಾಡಿದ್ದಾರೆ. ವಿದ್ಯುತ್ ತಂತಿಗೆ ಬ್ಯಾಗ್ ತಗುಲಿ ಬೆಂಕಿ ಹತ್ತಿಕೊಂಡಿದ್ದು ತಕ್ಷಣವೇ ಬೆಂಕಿ ನಂದಿಸಲಾಗಿದೆ. ಈ ಘಟನೆಯಲ್ಲಿ ಪ್ರಾಣಾಪಾಯವೇನೂ ಸಂಭವಿಸಿಲ್ಲ. ಸುರಕ್ಷತೆಯ ನಿಟ್ಟಿನಲ್ಲಿ ಬೋಗಿಗಳನ್ನು ತೆಗೆಯಲಾಗಿದೆ ಎಂದು ಸೆಂಟ್ರಲ್ ರೈಲ್ವೆಯ ಹಿರಿಯ ಪಿಆರ್‌ಒ ಎಕೆ ಜೈನ್ ಹೇಳಿದ್ದಾರೆ.

ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಕಾರಣ ಬೆಳಗ್ಗೆ 9.28ಕ್ಕೆ ಹೊರಡಬೇಕಿದ್ದ ರೈಲು 12 ನಿಮಿಷ ವಿಳಂಬವಾಗಿದೆ.

ರೈಲು ವಿಳಂಬವಾದ ಕಾರಣ ಹೆಚ್ಚಿನ ಪ್ರಯಾಣಿಕರು ವಾಶಿ ನಿಲ್ದಾಣದಿಂದ ಬಸ್‌ನಲ್ಲಿ ಪ್ರಯಾಣ ಮುಂದುವರಿಸಿದ್ದಾರೆ. ಇನ್ನು ಕೆಲವರು ರೈಲು ಸಂಚಾರ ಪುನರಾರಂಭಗೊಳ್ಳುವ ವರಗೆ ಕಾದು ನಿಂತರು ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.