ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ಕಾಶ್ಮೀರಿ ಪಂಡಿತನ ಅಂತಿಮ ವಿಧಿವಿಧಾನ ನೆರವೇರಿಸಿದ ನೆರೆಯ ಮುಸ್ಲಿಮರು

Published 15 ನವೆಂಬರ್ 2023, 13:19 IST
Last Updated 15 ನವೆಂಬರ್ 2023, 13:19 IST
ಅಕ್ಷರ ಗಾತ್ರ

ಪಾಂಪೋರ್ (ಪುಲ್ವಾಮಾ): ಮಂಗಳವಾರ ಸಂಜೆ ನಿಧನರಾದ ಕಾಶ್ಮೀರಿ ಪಂಡಿತರೊಬ್ಬರ ಅಂತಿಮ ವಿಧಿಗಳನ್ನು ಇಲ್ಲಿನ ನೆರೆಹೊರೆಯ ಮುಸ್ಲಿಮರು ನೆರವೇರಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರದಲ್ಲಿನ ಕೋಮು ಸೌಹಾರ್ದತೆಯ ಸಂಪ್ರದಾಯವನ್ನು ನೆನಪಿಸಿದ್ದಾರೆ.

ಅಶೋಕ್ ಕುಮಾರ್ ವಾಂಗೂ ಅವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಪಾಂಪೋರ್ ಪಟ್ಟಣದ ಡ್ರಂಗಬಾಲ್‌ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು. ಪಾರ್ಥಿವ ಶರೀರವನ್ನು ಜಮ್ಮುವಿಗೆ ಕೊಂಡೊಯ್ಯುವ ಬದಲು ಕಾಶ್ಮೀರ ಪಂಡಿತ ಸಮುದಾಯವು ಇಲ್ಲಿಯೇ ಅವರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ನಿರ್ಧರಿಸಿತು. ಈ ಸಂದರ್ಭ ನೆರೆಯ ಮುಸ್ಲಿಂ ಸಮುದಾಯದ ಜನರು ಪಂಡಿತರ ನೆರವಿಗೆ ಧಾವಿಸಿದ್ದಾರೆ.

‘ಅಶೋಕ್ ಕುಮಾರ್ ವಾಂಗೂ. ಅವರು ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ನಿಧನರಾದರು. ನಿಧನ ಸುದ್ದಿ ತಿಳಿದ ತಕ್ಷಣ, ಇಡೀ ಡ್ರಂಗಬಾಲ್ ಮೊಹಲ್ಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಬಂದು ಅಗಲಿದ ಆತ್ಮಕ್ಕೆ ಶಾಂತಿ ಕೋರಿದರು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಸಹಾಯ ಮಾಡಿದರು. ಪುರುಷರು, ಮಹಿಳೆಯರು ಮತ್ತು ಮಕ್ಕಳೆಲ್ಲರೂ ನೆರವಿಗೆ ಬಂದರು. ಹಾಗಾಗಿ, ಎಲ್ಲವೂ ಸುಸೂತ್ರವಾಗಿ ನೆರವೇರಿತು. ಈ ಸಾಮರಸ್ಯ ಹೊಸದೇನಲ್ಲ, ಇದು ಕಾಶ್ಮೀರಿಯತ್. ಆದರೆ, ಈಗಿನ ಕಾಲದಲ್ಲೂ ಸೌಹಾರ್ದತೆ ತೋರಿದ್ದು ಅತ್ಯಂತ ಸಂತಸದ ವಿಷಯ. ನಾವು ನಿಜಕ್ಕೂ ನಾವು ಧನ್ಯರು’ ಎಂದು ಮೃತಪಟ್ಟ ಅಶೋಕ್ ಕುಮಾರ್ ಅವರ ನೆರೆಯ ಕಾಶ್ಮೀರಿ ಪಂಡಿತ್ ರಾಜು ಭಟ್ ಹೇಳಿದರು.

ಈ ಪ್ರದೇಶವು ಮೊದಲಿನಿಂದಲೂ ಹಿಂದೂಗಳು, ಸಿಖ್ಖರು ಮತ್ತು ಮುಸ್ಲಿಮರ ಐಕ್ಯತೆಗೆ ಹೆಸರಾಗಿದೆ ಎಂದು ವಾಂಗೂ ಅವರ ಬಾಲ್ಯ ಸ್ನೇಹಿತ ಮೊಹಮ್ಮದ್ ಯೂಸುಫ್‌ ಮಲಿಕ್ ಹೇಳಿದ್ದಾರೆ.

‘ನಮಗೆ ಇಲ್ಲಿ ಯಾವತ್ತೂ ಯಾವುದೇ ಸಮಸ್ಯೆಗಳು ಎದುರಾಗಿಲ್ಲ. ಹಿಂದೂಗಳು, ಮುಸ್ಲಿಮರು ಮತ್ತು ಸಿಖ್ಖರು ಸೌಹಾರ್ದಯುತವಾಗಿ ಬದುಕುತಿದ್ದೇವೆ. ನಾವು ಪರಸ್ಪರರ ಸಂತೋಷ ಮತ್ತು ದುಃಖಗಳನ್ನು ಹಂಚಿಕೊಳ್ಳುತ್ತೇವೆ. ಪಂಡಿತ್ ಸಮುದಾಯವು ವಾಂಗೂ ಅವರ ಮೃತದೇಹವನ್ನು ಜಮ್ಮುವಿಗೆ ತೆಗೆದುಕೊಂಡು ಹೋಗದೆ ಇಲ್ಲಿಯೇ ಅಂತಿಮ ವಿಧಿ ವಿಧಾನ ನೆರವೇರಿಸಲು ನಿರ್ಧರಿಸಿತು. ಆದ್ದರಿಂದ. ನಾವೆಲ್ಲರೂ ಸಹಾಯ ಮಾಡಲು ಒಗ್ಗೂಡಿದ್ದೇವೆ’ ಎಂದು ಮಲಿಕ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT