ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಗುಸರಾಯ್‌: ವ್ಯಾಪಾರಿ ಮೇಲೆ ಗುಂಡಿನ ದಾಳಿ

Last Updated 27 ಮೇ 2019, 17:25 IST
ಅಕ್ಷರ ಗಾತ್ರ

ಬೇಗುಸರಾಯ್‌: ಬೀದಿ ಬದಿ ವ್ಯಾಪಾರಿಯೊಬ್ಬರ ಹೆಸರು ಕೇಳಿ,ಆತ ಮುಸ್ಲಿಂ ಎಂಬುವುದು ಗೊತ್ತಾಗುತ್ತಿದ್ದಂತೆ ಆತನ ಮೇಲೆ ಗುಂಡು ಹಾರಿಸಿದ ಘಟನೆ ಸೋಮವಾರ ನಡೆದಿದೆ.

ದ್ವೇಷದ ಅಪರಾಧ ಪ್ರಕರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

‘ಜಿಲ್ಲೆಯ ಕುಂಭಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.ರಾಜೀವ್‌ ಯಾದವ್‌ ಎಂಬಾತಬೀದಿ ಬದಿ ವ್ಯಾಪಾರಿ ಮೊಹಮ್ಮದ್‌ ಕಾಸಿಂ ಎಂಬಾತನ ಮೇಲೆ ಗುಂಡು ಹಾರಿಸಿದ್ದಾನೆ. ಆರೋಪಿಯು ತಲೆಮರೆಸಿಕೊಂಡಿದ್ದು, ಪತ್ತೆಗಾಗಿ ಜಾಲ ಬೀಸಲಾಗಿದೆ’ ಎಂದು ಚೆರಿಯಾ ಬರಿಯಾರ್ಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿ ನೀರಜ್‌ ಕುಮಾರ್‌ ಸಿಂಗ್‌ ತಿಳಿಸಿದ್ದಾರೆ.

ಕಾಸಿಂ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಘಟನೆ ಕುರಿತು ನೀಡಿರುವ ಹೇಳಿಕೆಯು ಸಾಮಾಜಿಕ ಜಾಲತಾಣದಲ್ಲಿ ಇದು ವೈರಲ್‌ ಆಗಿದೆ.

‘ನನ್ನ ನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದಾಗ ನನ್ನನ್ನು ನಿಲ್ಲಿಸಿ ಹೆಸರು ಕೇಳಿದ. ಹೆಸರು ಹೇಳುತ್ತಿದ್ದಂತೆ ನೀನು ಮುಸ್ಲಿಂ, ಇಲ್ಲೇನು ಮಾಡುತ್ತಿ ಪಾಕಿಸ್ತಾನಕ್ಕೆ ಹೋಗು ಎಂದು ಹೇಳಿದ. ನಂತರ ಪಿಸ್ತೂಲ್‌ ತೆಗೆದು ಹಿಂದಿನಿಂದ ನನ್ನ ಮೇಲೆ ಗುಂಡು ಹಾರಿಸಿದ. ಪಿಸ್ತೂಲ್‌ನಲ್ಲಿ ಒಂದೇ ಗುಂಡು ಇತ್ತು. ಪಿಸ್ತೂಲ್‌ಗೆ ಮತ್ತೆ ಗುಂಡು ಹಾಕಲು ಮುಂದಾಗುತ್ತಿದ್ದಂತೆ ನಾನು ಓಡಿದೆ’ ಎಂದು ಕಾಸಿಂ ಹೇಳಿದ್ದಾರೆ.

‘ರಾಜಕೀಯ ಲಾಭಕ್ಕಾಗಿ ಬಿಜೆಪಿ ನಾಯಕರು ದ್ವೇಷದ ಬೀಜ ಬಿತ್ತುತ್ತಿದ್ದಾರೆ. ತಪ್ಪಿತಸ್ಥನನ್ನು ಬಂಧಿಸುವವರೆಗೆ ಹೋರಾಟ ನಡೆಸುತ್ತೇವೆ’ ಎಂದು ಸಿಪಿಐ ನಾಯಕ ಕನ್ಹಯ್ಯಾ ಕುಮಾರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT