ಗುರುವಾರ, 20 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿನೇವಾ ಓಪನ್‌ ಟೆನಿಸ್‌: ಸುಮಿತ್‌ ನಗಾಲ್‌ಗೆ ನಿರಾಸೆ

Published 20 ಮೇ 2024, 20:39 IST
Last Updated 20 ಮೇ 2024, 20:39 IST
ಅಕ್ಷರ ಗಾತ್ರ

ಜಿನೇವಾ: ಭಾರತದ ಅಗ್ರಗಣ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಗಾಲ್‌ ಅವರು ಜಿನೇವಾ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಆರಂಭಿಕ ಸುತ್ತಿನಲ್ಲೇ ನಿರಾಸೆ ಅನುಭವಿಸಿದರು.

ಭಾನುವಾರ ನಡೆದ 32ರ ಘಟ್ಟದ ಪಂದ್ಯದಲ್ಲಿ ವಿಶ್ವದ 94ನೇ ರ‍್ಯಾಂಕ್‌ನ ನಗಾಲ್‌ 6-7 (7), 3-6 ಅಂತರದಲ್ಲಿ 19ನೇ ಕ್ರಮಾಂಕದ ಸೆಬಾಸ್ಟಿಯನ್ ಬೇಜ್ ಅವರಿಗೆ ಮಣಿಸಿದರು.

‘ಕ್ಲೇ ಕೋರ್ಟ್ ಸ್ಪೆಷಲಿಸ್ಟ್’ ಆಗಿರುವ ಅರ್ಜೆಂಟೀನಾದ ಬೇಜ್‌ ಒಂದು ಗಂಟೆ 52 ನಿಮಿಷಗಳ ಹೋರಾಟದಲ್ಲಿ 26 ವರ್ಷದ ನಗಾಲ್‌ ಅವರನ್ನು ಹಿಮ್ಮೆಟ್ಟಿಸಿ, ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದರು.

ನಗಾಲ್ ಆರಂಭದಲ್ಲಿ 4-1 ರಿಂದ ಮುನ್ನಡೆ ಸಾಧಿಸಿದ್ದರು. ಆದರೆ, ಪ್ರಸಕ್ತ ಋತುವಿನಲ್ಲಿ ಕ್ಲೇ ಕೋರ್ಟ್‌ನಲ್ಲೇ ಎರಡು ಪ್ರಶಸ್ತಿ (ರಿಯೋ ಓಪನ್‌, ಚಿಲಿ ಓಪನ್‌) ಗೆದ್ದುಕೊಂಡಿರುವ ಬೇಜ್‌, ನಂತರದಲ್ಲಿ ಹಿಡಿತ ಸಾಧಿಸಿದರು. ಮೊದಲ ಸೆಟ್‌ ಅನ್ನು ಟೈಬ್ರೇಕರ್‌ ಮೂಲಕ ಗೆದ್ದುಕೊಂಡ ಅವರು, ಎರಡನೇ ಸೆಟ್‌ ಅನ್ನು ಕೇವಲ 38 ನಿಮಿಷದಲ್ಲಿ ವಶಮಾಡಿಕೊಂಡರು.

‘ಈ ಸೋಲಿನಿಂದ ಎದೆಗುಂದಿಲ್ಲ. ರೋಲ್ಯಾಂಡ್‌ ಗ್ಯಾರೋಸ್‌ನಲ್ಲಿ ನಡೆ ಯುವ ಟೂರ್ನಿಗೆ ಸಿದ್ಧತೆ ನಡೆಸಲು ಸಹಕಾರಿಯಾಯಿತು’ ಎಂದು ನಗಾಲ್‌ ಸೋಲಿನ ನಂತರ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT