ಜೈಪುರ (ಪಿಟಿಐ): ಪಹಲ್ಗಾಮ್ ಭಯೋತ್ಪಾದನಾ ದಾಳಿಯನ್ನು ಖಂಡಿಸಿ, ಅದರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ರಾಜಸ್ಥಾನದಲ್ಲಿ ‘ಸಿಹಿ’ ಯುದ್ಧ ನಡೆಯುತ್ತಿದೆ. ಭಾರತೀಯವಾಗಿರುವ, ಅತ್ಯಂತ ಸಾಂಪ್ರದಾಯಿಕ ಸಿಹಿತಿನಿಸುಗಳ ಹೆಸರಿನಲ್ಲಿದ್ದ ‘ಪಾಕ್’ ಈಗ ‘ಶ್ರೀ’ ಎಂದು ಬದಲಾಗಿದೆ.

ಮೈಸೂರು ಪಾಕ್– ಈಗ ಮೈಸೂರು ಶ್ರೀ. ಆಮ್ ಪಾಕ್– ಆಮ್ ಶ್ರೀ. ಗೊಂದ್ ಪಾಕ್– ಗೊಂದ್ ಶ್ರೀ... ಹೀಗೆ ಪಾಕ್ ಎಂಬ ಹೆಸರಿನಲ್ಲಿ ಕೊನೆಗೊಳ್ಳುವ ಎಲ್ಲ ತಿಸಿಸುಗಳ ಹೆಸರು ಬದಲಾಗಿವೆ. ರಾಜಸ್ಥಾನದ ಖ್ಯಾತ ಸಿಹಿತಿಸಿಸು ವ್ಯಾಪಾರಿಗಳು ಇಂಥದ್ದೊಂದು ‘ಪ್ರತೀಕಾರ’ ಕೈಗೊಂಡಿದ್ದಾರೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ ಎನ್ನುತ್ತಿದ್ದಾರೆ.

‘ನಾವು ಸ್ಪಷ್ಟ ಸಂದೇಶ ನೀಡಲು ಬಯಸುತ್ತಿದ್ದೇವೆ. ಭಾರತದ ಮೇಲೆ ಕಣ್ಣೆತ್ತುವ ಧೈರ್ಯ ಮಾಡಿದರೆ, ನಾವು ಅಂಥವರ ಹೆಸರನ್ನು ಅಳಿಸಿಹಾಕುತ್ತೇವೆ. ಪ್ರತಿ ಭಾರತೀಯನು ಅವನದ್ದೇ ಆದ ರೀತಿಯಲ್ಲಿ ಇದಕ್ಕೆ ಪ್ರತಿಕ್ರಿಯಿಸುತ್ತಾನೆ. ಇದು ನಮ್ಮ ಸಾಂಕೇತಿಕವಾದ ‘ಸಿಹಿ’ ಪ್ರತೀಕಾರ’ ಎನ್ನುತ್ತಾರೆ ಖ್ಯಾತ ‘ಬಾಂಬೆ ಮಿಷ್ಠಾನ್ ಭಂಡಾರ’ ಅಂಗಡಿಯ ವಿನೀತ್ ತ್ರಿಖಾ.

- ‘ಪಾಕ್’ ಎಂದರೆ ಪಾಕಿಸ್ತಾನವೇ?

ರೆಖ್ತಾ ಡಿಕ್ಷನರಿ ಪ್ರಕರಾ ‘ಪಾಕ್’ ಪದವು ಪರ್ಷಿಯಾ ಮೂಲದ್ದು. ಇದರ ಅರ್ಥ ‘ಸಿಹಿತಿಸಿಸು’ ಅಥವಾ ‘ವಿಠಾಯಿ’. ಇದರೊಂದಿಗೆ ಈ ಪದಕ್ಕೆ ‘ಶುದ್ಧ ಸ್ವಚ್ಛ ಮತ್ತು ಪವಿತ್ರ’ ಎನ್ನುವ ಅರ್ಥವೂ ಇದೆ. ಹಿಂದೂ ಪದಕೋಶ ‘ಶಬ್ದಕೋಶ. ಕಾಂ’ ಪ್ರಕಾರ ‘ಪಾಕ್’ ಎಂದರೆ ‘ಅಡುಗೆ ಮಾಡುವುದು’ ಎಂದರ್ಥ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.