ನವದೆಹಲಿ: ಭಾರತೀಯ ಪತ್ರಿಕಾ ಮಂಡಳಿ (ಪಿಟಿಐ) ಅಧ್ಯಕ್ಷರಾಗಿ‘ದಿ ಹಿಂದು ಗ್ರೂಪ್’ ಪ್ರಕಾಶಕ ಎನ್. ರವಿ ಹಾಗೂ ಉಪಾಧ್ಯಕ್ಷರಾಗಿ ‘ಪಂಜಾಬ್ ಕೇಸರಿ ಗ್ರೂಪ್’ ಮುಖ್ಯ ಸಂಪಾದಕ ವಿಜಯ್ ಕುಮಾರ್ ಚೋಪ್ರಾ ಶನಿವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಂಡಳಿಯ ಸದಸ್ಯರಾಗಿದಿ ಪ್ರಿಂಟರ್ಸ್ ಮೈಸೂರು (ಪ್ರೈವೇಟ್) ಲಿಮಿಟೆಡ್ ನಿರ್ದೇಶಕ ಕೆ.ಎನ್. ಶಾಂತಕುಮಾರ್, ಮಹೇಂದ್ರ ಮೋಹನ್ ಗುಪ್ತಾ (ದೈನಿಕ್ ಜಾಗರಣ್), ‘ಟೈಮ್ಸ್ ಆಫ್ ಇಂಡಿಯಾ’ದ ವಿನೀತ್ ಜೈನ್, ‘ಆನಂದ್ ಬಜಾರ್ ಪತ್ರಿಕಾ’ದ ಅವೀಕ್ ಕುಮಾರ್ ಸರ್ಕಾರ್,‘ಮಾತೃಭೂಮಿ’ಯ ಎಂ.ಪಿ. ವೀರೇಂದ್ರ ಕುಮಾರ್, ‘ದಿನಮಲರ್’ನ ಆರ್.ಲಕ್ಷ್ಮೀಪತಿ, ‘ಬಾಂಬೆ ಸಮಾಚಾರ್’ನ ಹೊರ್ಮುಸ್ಜಿ ಎನ್.ಕಾಮಾ, ನ್ಯಾಯಮೂರ್ತಿ ಆರ್.ಸಿ. ಲಹೋಟಿ, ಪ್ರೊ. ದೀಪಕ್ ನಯ್ಯರ್, ಶ್ಯಾಮ್ ಸರಣ್ ಹಾಗೂ ಜೆ.ಎಫ್. ಪೊಚ್‌ಖನವಲ್ಲಾ ಆಯ್ಕೆಯಾಗಿದ್ದಾರೆ.

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ರವಿ (70),ಭಾರತ, ಅಮೆರಿಕದಲ್ಲಿ ಪತ್ರಿಕೋದ್ಯಮದ ಅನುಭವ ಹೊಂದಿದ್ದಾರೆ. ಈ ಹಿಂದೆ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಅಧ್ಯಕ್ಷರಾಗಿದ್ದ ಅವರು, ಪ್ರಸ್ತುತ ಭಾರತೀಯ ವಿದ್ಯಾಭವನದ ಚೆನ್ನೈ ಕೇಂದ್ರದ ಅಧ್ಯಕ್ಷರಾಗಿದ್ದಾರೆ.

ಚೋಪ್ರಾ (86) ಪಿಟಿಐ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಕೊಡುಗೆಗಾಗಿ 1990ರಲ್ಲಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.