ಕೊಹಿಮಾ: ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹಾಗೂ ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಮೈತ್ರಿಕೂಟ 37 ಸ್ಥಾನಗಳನ್ನು ಜಯಿಸಿ, ಸ್ಪಷ್ಟ ಬಹುಮತ ಸಾಧಿಸಿವೆ. ಇದರೊಂದಿಗೆ ಸತತ ಎರಡನೇ ಅವಧಿಗೆ ಸರ್ಕಾರ ರಚಿಸಲಿವೆ.

60 ಸದಸ್ಯ ಬಲದ ನಾಗಾಲ್ಯಾಂಡ್ ವಿಧಾನಸಭೆಯ 59 ಕ್ಷೇತ್ರಗಳಿಗೆ ಸೋಮವಾರ (ಫೆಬ್ರುವರಿ 27 ರಂದು) ಮತದಾನ ನಡೆದಿತ್ತು. ಈ ಪೈಕಿ ಎನ್ಡಿಪಿಪಿ 40 ಕ್ಷೇತ್ರಗಳಲ್ಲಿ ಹಾಗೂ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿತ್ತು.

ಒಂದು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 59 ಕ್ಷೇತ್ರಗಳ ಫಲಿತಾಂಶ ಸದ್ಯ ಪ್ರಕಟವಾಗಿದೆ. ಇದರಲ್ಲಿ ಎನ್ಡಿಪಿಪಿ 25 ಸ್ಥಾನಗಳನ್ನು ಜಯಿಸಿದ್ದರೆ, ಬಿಜೆಪಿ 12 ಕಡೆ ಜಯದ ನಗೆ ಬೀರಿದೆ.

ಸದ್ಯ ನಾಗಾಲ್ಯಾಂಡ್ ಮುಖ್ಯಮಂತ್ರಿಯಾಗಿರುವ ನೆಫಿಯು ರಿಯೊ ಅವರು ನಾಗಾ ಪೀಪಲ್ ಫ್ರಂಟ್ (ಎನ್ಪಿಎಫ್) ಪಕ್ಷದಿಂದ ಹೊರಬಂದು 2017ರಲ್ಲಿ ಎನ್ಡಿಪಿಪಿ ಸ್ಥಾಪಿಸಿಸಿದ್ದರು. ಅದಾದ ಬಳಿಕ, ರಾಜ್ಯದಲ್ಲಿ ಎನ್ಪಿಎಫ್ ದುರ್ಬಲಗೊಂಡಿದೆ.

ಇದನ್ನೂ ಓದಿ: ನಾಗಾಲ್ಯಾಂಡ್ ವಿಧಾನಸಭೆಗೆ ಆಯ್ಕೆಯಾದ ಮೊದಲ ಮಹಿಳೆ ಹೆಖಾನಿ ಜಖಲು

2013ರಲ್ಲಿ 38 ಕ್ಷೇತ್ರ ಜಯಿಸಿ ಸರ್ಕಾರ ರಚಿಸಿದ್ದ ಎನ್ಪಿಎಫ್, 2018ರ ಚುನಾವಣೆಯಲ್ಲಿ 12 ಕ್ಷೇತ್ರಗಳನ್ನು ಕಳೆದುಕೊಂಡು 26 ಕ್ಷೇತ್ರಗಳಲ್ಲಷ್ಟೇ ಗೆದ್ದಿತ್ತು. ಅತಿ ದೊಡ್ಡ ಪಕ್ಷ ಎನಿಸಿಕೊಂಡಿತ್ತಾದರೂ, ಸರ್ಕಾರ ರಚಿಸಲು ಸಾಧ್ಯವಾಗಿರಲಿಲ್ಲ. ಆಗ ಎನ್ಡಿಪಿಪಿ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿದ್ದವು. ರಿಯೊ ಮುಖ್ಯಮಂತ್ರಿಯಾಗಿದ್ದರು.

ಎನ್ಪಿಎಫ್ ಈ ಬಾರಿ ಕೇವಲ 2 ಸ್ಥಾನಗಳನ್ನು ಜಯಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.