ನವದೆಹಲಿ: ‘ಇದನ್ನು ಕೇವಲ ಹಳೆಯ ಸಂಸತ್ ಭವನ ಎಂದು ಕರೆಯಬಾರದು. ಹಳೆಯ ಸಂಸತ್ ಕಟ್ಟಡಕ್ಕೆ ‘ಸಂವಿಧಾನ ಸದನ’ ಎಂದು ಹೆಸರಿಡಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ಹಳೆಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಮಾತನಾಡಿದ ಮೋದಿ, ‘ಗಣೇಶ ಚತುರ್ಥಿಯ ಮಂಗಳಕರ ದಿನದಂದು ನಾವು ಹೊಸ ಸಂಸತ್ತಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುತ್ತಿದ್ದೇವೆ. ನವ ಭವಿಷ್ಯದತ್ತ ಹೆಜ್ಜೆ ಇಡುತ್ತಿದ್ದೇವೆ’ ಎಂದರು.

‘ಹೊಸ ಕಟ್ಟಡಕ್ಕೆ ಹೋಗುತ್ತಿರುವಾಗ, ಹಳೆ ಕಟ್ಟಡದ ವೈಭವ ಕುಸಿಯದಂತೆ ನಾವು ನೋಡಿಕೊಳ್ಳಬೇಕಾಗಿದೆ. ಇದನ್ನು ಕೇವಲ ಹಳೆಯ ಸಂಸತ್ತು ಎಂದು ಕರೆಯಬಾರದು, ಬದಲಾಗಿ ‘ಸಂವಿಧಾನ ಸದನ’ ಎಂದು ಹೆಸರಿಡಬಹುದು’ ಎಂದರು.

ನಿನ್ನೆಯಿಂದ ಸಂಸತ್ ವಿಶೇಷ ಅಧಿವೇಶ ಆರಂಭಗೊಂಡಿದ್ದು, ಐದು ದಿನಗಳ ಕಾಲ ನಡೆಯಲಿದೆ. ಇಂದು ಮಧ್ಯಾಹ್ನದಿಂದ ಹೊಸ ಸಂಸತ್ ಭವನದಲ್ಲಿ ಕಲಾಪಗಳು ಆರಂಭವಾಗಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.