ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನಗೆ ದೇಶ ಮೊದಲು, ಭಾರತ ಸುರಕ್ಷಿತ ಕೈಗಳಲ್ಲಿದೆ: ನರೇಂದ್ರ ಮೋದಿ 

Last Updated 26 ಫೆಬ್ರುವರಿ 2019, 11:02 IST
ಅಕ್ಷರ ಗಾತ್ರ

ಚುರು (ರಾಜಸ್ಥಾನ): ಪಾಕಿಸ್ತಾನದ ಉಗ್ರ ಶಿಬಿರಗಳ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದ ನಂತರ ರಾಜಸ್ತಾನದ ಚುರುನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಭಾರತ ಸುರಕ್ಷಿತ ಕೈಗಳಲ್ಲಿದೆ ಎಂದಿದ್ದಾರೆ.

2014ರಲ್ಲಿ ನಾನು ಹೇಳಿದ್ದನ್ನೇ ಈಗ ಪುನರಾರ್ತಿಸುತ್ತೇನೆ.ಈ ದೇಶದ ಮಣ್ಣಿನ ಆಣೆ, ಈ ದೇಶ ನಾಶವಾಗಲು ಬಿಡುವುದಿಲ್ಲ, ಈ ದೇಶವನ್ನು ನಿಲ್ಲಲು ಬಿಡುವುದಿಲ್ಲ. ಈ ದೇಶ ತಲೆ ಬಾಗುವಂತೆ ಮಾಡುವುದಿಲ್ಲ ಎಂದು ಮೋದಿ ಭಾಷಣ ಆರಂಭಿಸಿದ್ದಾರೆ.

ಭಾರತದ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ದಿನ ಇದು. ನಾನು ನಿಮ್ಮ ಜೋಷ್ ಅರ್ಥ ಮಾಡಬಲ್ಲೆ.ಇದು ಪ್ರತಿ ಭಾರತೀಯನ ಗೆಲುವು.ಭಾರತದ ಮೇಲೆ ಯಾವ ಬೆದರಿಕೆಯೂ ಬರದಂತೆ ನಾವು ನೋಡಿಕೊಳ್ಳುತ್ತೇವೆ.ನಿಮ್ಮ ಸೇವೆಯೇ ನನ್ನ ಆದ್ಯತೆ.
ನನಗೆ ದೇಶ ಮೊದಲು. ಅದಕ್ಕಾಗಿ ಈ ಪ್ರಧಾನ್ ಸೇವಕ್ ಕೆಲಸ ಮಾಡುತ್ತಿದ್ದೇನೆ.ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್ ಎಂಬ ಘೋಷಣೆ ಮೂಲಕ ನಾವು ಮುಂದೆ ಸಾಗುತ್ತಿದ್ದೇವೆ.

ಎರಡು ದಿನಗಳ ಹಿಂದೆಯಷ್ಟೇ ನಾನು ಪ್ರಧಾನ್ ಮಂತ್ರಿ ಸಮ್ಮಾನ್ ನಿಧಿ ಯೋಜನೆಗೆ ಉತ್ತರ ಪ್ರದೇಶದಲ್ಲಿ ಚಾಲನೆ ನೀಡಿದೆ ಎಂದು ಹೇಳಲು ಖುಷಿ ಪಡುತ್ತೇನೆ.

50 ಲಕ್ಷಕಿಂತಲೂ ಹೆಚ್ಚು ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಚುರು ಅಥವಾ ರಾಜಸ್ತಾನದಲ್ಲಿರುವ ಯಾವುದೇ ರೈತ ಕುಟುಂಬ ಈ ಯೋಜನೆ ಪಡೆದಿಲ್ಲ. ಯಾಕೆಂದರೆ ಇಲ್ಲಿರುವ ಕಾಂಗ್ರೆಸ್ ಸರ್ಕಾರ ಯೋಜನೆಯ ಲಾಭ ಪಡೆಯಲು ಅರ್ಹತೆಯುಳ್ಳ ರೈತರ ಪಟ್ಟಿಯನ್ನು ಕಳಿಸಿಕೊಟ್ಟಿಲ್ಲ.

ಉತ್ತರ ಪ್ರದೇಶ ಸರ್ಕಾರ ರೈತರ ಪಟ್ಟಿಯನ್ನು ಕಳಿಸಿಕೊಟ್ಟಿದ್ದು, ಈ ಯೋಜನೆಯ ಲಾಭವನ್ನು ಪಡೆದುಕೊಂಡವರಲ್ಲಿ ಮೊದಲಿಗರಾಗಿದ್ದಾರೆ.

ರಾಜಕೀಯದಿಂದಾಗಿ ರೈತರಿಗೆ ಸಿಗುವ ಯೋಜನೆಯನ್ನು ತಡೆಯಬೇಡಿ ಎಂದು ಮೋದಿ ರಾಜಸ್ಥಾನ ಸರ್ಕಾರದಲ್ಲಿ ವಿನಂತಿಸಿದ್ದಾರೆ.
20 ಲಕ್ಷ ಯೋಧರಿಗೆ ಒಂದು ಶ್ರೇಣಿ, ಒಂದು ಪಿಂಚಣಿ (OROP)ಯೋಜನೆನೀಡಿದ್ದೇವೆ. ಮುಂದಿನ 10 ವರ್ಷಗಳಲ್ಲಿ ರೈತರ ಖಾತೆಗಳಿಗೆ ₹7.5 ಲಕ್ಷ ಕೋಟಿ ಜಮೆಮಾಡಲಾಗುವುದು.ನಿಮ್ಮ ಖಾತೆಗೆ ಹಣ ಜಮೆಆದ ಕೂಡಲೇ ಮೊಬೈಲ್‍ಗೆ ಸಂದೇಶ ಲಭಿಸಲಿದೆ ಎಂದಿದ್ದಾರೆ ಮೋದಿ.

ಇನ್ನಷ್ಟು ಓದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT