ನವದೆಹಲಿ: 2022–23ನೆಯ ಹಣಕಾಸು ವರ್ಷದಲ್ಲಿ ಆರು ರಾಷ್ಟ್ರೀಯ ಪಕ್ಷಗಳು ಒಟ್ಟು ₹3,077 ಕೋಟಿ ವರಮಾನ ಪಡೆದಿರುವುದಾಗಿ ಘೋಷಿಸಿಕೊಂಡಿವೆ. ಈ ಪೈಕಿ ಬಿಜೆಪಿಯ ವರಮಾನವು ಒಟ್ಟು ₹2,361 ಕೋಟಿ. ಅಂದರೆ ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ವರಮಾನದ ಶೇಕಡ 76.73ರಷ್ಟು.

ಎರಡನೆಯ ಅತಿಹೆಚ್ಚಿನ ವರಮಾನ ಇರುವುದು ಕಾಂಗ್ರೆಸ್ಸಿಗೆ. ಈ ಪಕ್ಷವು 2022–23ನೆಯ ಹಣಕಾಸು ವರ್ಷದಲ್ಲಿ ₹452.37 ಕೋಟಿ ವರಮಾನ ಗಳಿಸಿದೆ, ಇದು ಆರು ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯದ ಶೇ 14.70ರಷ್ಟು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತಿಳಿಸಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರವೇ ಅಲ್ಲದೆ, ಬಿಎಸ್ಪಿ, ಎಎಪಿ, ಎನ್ಪಿಪಿ ಹಾಗೂ ಸಿಪಿಎಂ ಪಕ್ಷಗಳು ತಮ್ಮ ವರಮಾನ ಘೋಷಿಸಿವೆ.

2021-22ನೆಯ ಹಣಕಾಸು ವರ್ಷದಿಂದ 2022–23ನೆಯ ಹಣಕಾಸು ವರ್ಷದ ನಡುವಿನ ಅವಧಿಯಲ್ಲಿ ಬಿಜೆಪಿಯ ವರಮಾನವು ಶೇ 23.15ರಷ್ಟು (ಮೊತ್ತದ ಲೆಕ್ಕದಲ್ಲಿ ₹443.72 ಕೋಟಿಯಷ್ಟು) ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಕಾಂಗ್ರೆಸ್ಸಿನ ವರಮಾನವು ಶೇ 16.42ರಷ್ಟು (ಮೊತ್ತದ ಲೆಕ್ಕದಲ್ಲಿ ₹88.90 ಕೋಟಿ) ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.