ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಡಾರ್ಕ್‌ನೆಟ್‌’ ಬಳಸಿ ಡ್ರಗ್ಸ್‌ ಕಳ್ಳಸಾಗಣೆ ಭೇದಿಸಿದ ಎನ್‌ಸಿಬಿ

ಎಲ್‌ಎಸ್‌ಡಿ ಹಾಳೆಗಳ ಜಪ್ತಿ , 6 ಜನರ ಬಂಧನ
Published 6 ಜೂನ್ 2023, 11:16 IST
Last Updated 6 ಜೂನ್ 2023, 11:16 IST
ಅಕ್ಷರ ಗಾತ್ರ

ನವದೆಹಲಿ: ‘ಡಾರ್ಕ್‌ನೆಟ್‌’ ಬಳಸಿ ದೇಶದಾದ್ಯಂತ ಡ್ರಗ್ಸ್‌ ಕಳ್ಳಸಾಗಣೆ ಮಾಡುತ್ತಿದ್ದ ಬೃಹತ್‌ ಜಾಲವನ್ನು ಭೇದಿಸಿರುವ ಮಾದಕವಸ್ತು ನಿಯಂತ್ರಣ ಸಂಸ್ಥೆ (ಎನ್‌ಸಿಬಿ), ‘ಎಲ್‌ಎಸ್‌ಡಿ’ಯ 15 ಸಾವಿರ ಹಾಳೆಗಳನ್ನು ವಶಪಡಿಸಿಕೊಂಡು, ಆರು ಜನ ಆರೋಪಿಗಳನ್ನು ಬಂಧಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.

ಬಂಧಿತರಲ್ಲಿ ವಿದ್ಯಾರ್ಥಿಗಳು ಹಾಗೂ ಯುವಕರು ಇದ್ದಾರೆ ಎಂದು ಎನ್‌ಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಡಾರ್ಕ್‌ನೆಟ್‌ ಬಳಸಿ ನಡೆಸುತ್ತಿದ್ದ ಡ್ರಗ್ಸ್‌ ಕಳ್ಳಸಾಗಣೆಗೆ ಕ್ರಿಪ್ಟೊಕರೆನ್ಸಿಗಳ ಮೂಲಕ ಪಾವತಿ ಮಾಡಲಾಗುತ್ತಿತ್ತು. ಈ ಜಾಲ ಪೋಲೆಂಡ್, ನೆದರ್ಲೆಂಡ್ಸ್, ಅಮೆರಿಕ ಹಾಗೂ ಭಾರತದ ಹಲವಾರು ರಾಜ್ಯಗಳಲ್ಲಿ ಸಕ್ರಿಯವಾಗಿತ್ತು’ ಎಂದು ಎನ್‌ಸಿಬಿ ಉಪಪ್ರಧಾನ ನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ ಸಿಂಗ್ ಹೇಳಿದ್ದಾರೆ.

‘ಇದೇ ಮೊದಲ ಬಾರಿಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಲ್‌ಎಸ್‌ಡಿ ಜಪ್ತಿ ಮಾಡಲಾಗಿದೆ. ಈ ಹಿಂದೆ, 2021ರಲ್ಲಿ ಕರ್ನಾಟಕ ಪೊಲೀಸರು, ಕಳೆದ ವರ್ಷ ಕೋಲ್ಕತ್ತದಲ್ಲಿ ಎನ್‌ಸಿಬಿ ನಡೆಸಿದ್ದ ಕಾರ್ಯಾಚರಣೆಯಲ್ಲಿ ಎಲ್‌ಎಸ್‌ಡಿಯ 5 ಸಾವಿರ ಹಾಳೆಗಳನ್ನು ಜಪ್ತಿ ಮಾಡಲಾಗಿತ್ತು’ ಎಂದು ತಿಳಿಸಿದ್ದಾರೆ.

‘ಯುವ ಜನತೆಯಲ್ಲೇ ಎಲ್‌ಎಸ್‌ಡಿ ಬಳಕೆ ಹೆಚ್ಚಾಗಿ ಕಂಡುಬರುತ್ತಿದೆ. ಇದು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ವ್ಯಕ್ತಿ ಬಳಿ 0.1 ಗ್ರಾಮ್‌ನಷ್ಟು ಎಲ್‌ಸಿಡಿ ಸಿಕ್ಕರೂ, ಆತನಿಗೆ ಎನ್‌ಡಿಪಿಎಸ್‌ ಕಾಯ್ದೆಯಡಿ ಕಠಿಣ ಶಿಕ್ಷೆ ವಿಧಿಸಲಾಗುತ್ತದೆ’ ಎಂದು ಸಿಂಗ್‌ ಹೇಳಿದ್ದಾರೆ.

‘ಲಿಸರ್ಜಿಕ್ ಆ್ಯಸಿಡ್ ಡೈಈಥೈಲ್ ಅಮೈಡ್‌’ ಅನ್ನು ಸಂಕ್ಷಿಪ್ತವಾಗಿ ‘ಎಲ್‌ಎಸ್‌ಡಿ’ ಎನ್ನಲಾಗುತ್ತಿದೆ. ಇದು ರಾಸಾಯನಿಕ ಆಧಾರಿತ ಡ್ರಗ್ ಆಗಿದ್ದು, ಇದರ ಸೇವನೆ ವ್ಯಕ್ತಿಯನ್ನು ಭ್ರಮಾಲೋಕದಲ್ಲಿ ತೇಲಾಡುವಂತೆ ಮಾಡುತ್ತದೆ.

ಹಾಳೆಯ ಚೂರಿನಂತಿರುವ ‘ಎಲ್‌ಎಸ್‌ಡಿ’ಯನ್ನು ನಾಲಿಗೆ ಮೇಲೆ ಇಟ್ಟುಕೊಂಡಾಕ್ಷಣ ಕರಗಿ, ಮತ್ತೇರುವಂತೆ ಮಾಡುತ್ತದೆ.

ಡ್ರಗ್ಸ್‌ ಕಳ್ಳಸಾಗಣೆಯಲ್ಲಿ ತೊಡಗಿದ್ದ ಶಂಕೆ ಮೇಲೆ ಎನ್‌ಸಿಬಿ ಅಧಿಕಾರಿಗಳು ಆರು ಜನರನ್ನು ಬಂಧಿಸಿದೆ –ಪಿಟಿಐ
ಡ್ರಗ್ಸ್‌ ಕಳ್ಳಸಾಗಣೆಯಲ್ಲಿ ತೊಡಗಿದ್ದ ಶಂಕೆ ಮೇಲೆ ಎನ್‌ಸಿಬಿ ಅಧಿಕಾರಿಗಳು ಆರು ಜನರನ್ನು ಬಂಧಿಸಿದೆ –ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT