ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಕಿಸ್ತಾನ ಶಾಲೆಯಲ್ಲಿ ಅಗ್ನಿ ಅವಘಡ: 1,400 ವಿದ್ಯಾರ್ಥಿನಿಯರು ಪಾರು

Published 27 ಮೇ 2024, 14:02 IST
Last Updated 27 ಮೇ 2024, 14:02 IST
ಅಕ್ಷರ ಗಾತ್ರ

ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಶಾಲಾ ಕಟ್ಟಡದಲ್ಲಿ ಸೋಮವಾರ ಅಗ್ನಿ ಅವಘಡ ಸಂಭವಿಸಿದ್ದು, 1,400 ವಿದ್ಯಾರ್ಥಿನಿಯರನ್ನು ಸುರಕ್ಷಿತವಾಗಿ ಹೊರಗೆ ಕರತರಲಾಗಿದೆ.

‘ಹರಿಪುರ್ ಜಿಲ್ಲೆಯ ಸಿರಿಕೊಟ್ ಗ್ರಾಮದ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವಘಡ ಸಂಭವಿಸಿದ್ದು, ಬೆಂಕಿ ಹೊತ್ತಿಕೊಂಡಾಗ ನೂರಾರು ವಿದ್ಯಾರ್ಥಿನಿಯರು ತರಗತಿಗಳಲ್ಲಿ ಇದ್ದರು ಎಂದು ‘ಜಿಯೊ ನ್ಯೂಸ್‌’ ಸುದ್ದಿ ವಾಹಿನಿ ವರದಿ ಮಾಡಿದೆ.  

‘ಅಗ್ನಿಶಾಮಕ ಸಿಬ್ಬಂದಿ, ಸ್ಥಳೀಯರ ನೆರವಿನೊಂದಿಗೆ ಸುಮಾರು 1,400 ವಿದ್ಯಾರ್ಥಿನಿಯರನ್ನು ಹೊರತೆ ಕರೆತಂದರು. ಬೆಂಕಿಯಿಂದಾಗಿ ಇಡೀ ಕಟ್ಟಡಕ್ಕೆ ಹಾನಿಯಾಗಿದೆ. ಕಟ್ಟಡದ ಶೇ 50ರಷ್ಟು ನಿರ್ಮಾಣಕ್ಕೆ ಮರ ಬಳಕೆಯಾಗಿತ್ತು. ಯಾವುದೇ ಜೀವಹಾನಿಯಾಗಿಲ್ಲ. ಶಾರ್ಟ್‌ ಸರ್ಕಿಟ್‌ನಿಂದಾಗಿ ಬೆಂಕಿ ಹೊತ್ತಿಕೊಂಡಿತ್ತು’ ಎಂದು ಅಗ್ನಿಶಾಮಕ ಇಲಾಖೆ ವಕ್ತಾರ ಫರಾಜ್‌ ಜಲಾಲ್‌ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT