ಬೆಂಗಳೂರು: ವಿದೇಶಗಳಲ್ಲಿ ವೈದ್ಯಕೀಯ ಕೋರ್ಸ್‌ಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ನೀಟ್ (ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ) ಅಂಕಪಟ್ಟಿಯನ್ನು ಮೂರು ವರ್ಷಗಳವರೆಗೆ ಬಳಸಲು ಅವಕಾಶ ನೀಡಲಾಗಿದೆ.

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ವೈದ್ಯಕೀಯ ಪದವಿ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನೀಟ್ ಅಂಕಪಟ್ಟಿ ಕಡ್ಡಾಯ. ವಿದ್ಯಾರ್ಥಿಗಳ ಕೋರಿಕೆಯ ಮೇರೆಗೆ ನೀಟ್ ಪರೀಕ್ಷೆಯ ಅಂಕವನ್ನು ಮೂರು ವರ್ಷಗಳ ಅವಧಿಗೆ ಮಾನ್ಯ ಮಾಡಲು ಭಾರತೀಯ ವೈದ್ಯಕೀಯ ಮಂಡಳಿ ನಿರ್ಧಾರ ತೆಗೆದುಕೊಂಡಿದೆ.

ವಿದೇಶಗಳಲ್ಲಿ ವೈದ್ಯಕೀಯ ಕೋರ್ಸ್ ಮಾಡ ಬಯಸುವ ವಿದ್ಯಾರ್ಥಿಗಳಿಗೆ ಹಣಕಾಸು ವ್ಯವಸ್ಥೆ, ವಿಸಾ ಮತ್ತಿತರ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಕೆಲವರು ಆರಂಭದಲ್ಲೇ ಸಿದ್ಧತೆ ಮಾಡಿಕೊಳ್ಳುವುದಿಲ್ಲ.

ಇನ್ನು ಕೆಲವು ಸಂದರ್ಭದಲ್ಲಿ ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಫಲಿತಾಂಶ ಬಂದುವರ್ಷದ ಬಳಿಕ ಪ್ರವೇಶ ನೀಡುತ್ತವೆ. ಇವೆಲ್ಲ ಆಗಲು ಸಾಕಷ್ಟು ಬಾರಿ ಒಂದೂವರೆ ವರ್ಷವೇ ಬೇಕಾಗುತ್ತದೆ. ವಿಳಂಬದ ಕಾರಣ ವಿದ್ಯಾರ್ಥಿಗಳು ಎರಡನೇ ಬಾರಿ ನೀಟ್ ಪರೀಕ್ಷೆ ಬರೆಯಬೇಕಾಗುತ್ತದೆ. ಆಗ ಅಂಕ ಗಳಿಕೆಯಲ್ಲಿ ವ್ಯತ್ಯಾಸವಾದರೆ, ಸೀಟು ಪಡೆಯುವುದು ಕಷ್ಟವಾಗುತ್ತದೆ.

ಎರಡನೇ ಬಾರಿ ನೀಟ್ ಪರೀಕ್ಷೆ ಬರೆಯುವುದನ್ನು ತಪ್ಪಿಸಲು ಒಮ್ಮೆ ಪರೀಕ್ಷೆ ಬರೆದ ಅಂಕ ಪಟ್ಟಿಯನ್ನೇ ಕನಿಷ್ಠ ಮೂರು ವರ್ಷಗಳ ಅವಧಿಗೆ ಮಾನ್ಯ ಮಾಡಬೇಕು ಎಂಬ ಒತ್ತಾಯ ವಿದ್ಯಾರ್ಥಿಗಳಿಂದ ಕೇಳಿ ಬಂದಿತ್ತು. ಅವರ ಹಿತದೃಷ್ಟಿಯಿಂದ ಈ ಕ್ರಮ
ತೆಗೆದುಕೊಳ್ಳಲಾಗಿದೆ ಎಂದು ಭಾರತೀಯ ವೈದ್ಯಕೀಯ ಮಂಡಳಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.