ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮ ಮಂದಿರ ಉದ್ಘಾಟನೆ: ನೇಪಾಳದಿಂದ ವಿಶೇಷ ಸ್ಮರಣಿಕೆ

Published 24 ಡಿಸೆಂಬರ್ 2023, 15:50 IST
Last Updated 24 ಡಿಸೆಂಬರ್ 2023, 15:50 IST
ಅಕ್ಷರ ಗಾತ್ರ

ಕಠ್ಮಂಡು: ಅಯೋಧ್ಯೆಯಲ್ಲಿ ಮುಂದಿನ ತಿಂಗಳು ನಡೆಯಲಿರುವ ರಾಮ ಮಂದಿರ ಉದ್ಘಾಟನಾ ಸಮಾರಂಭಕ್ಕೆ ನೇಪಾಳವು ವಿವಿಧ ವಿನ್ಯಾಸದ ಆಭರಣಗಳು, ವಸ್ತ್ರ, ಪಾತ್ರೆಗಳು ಮತ್ತು ಸಿಹಿತಿಂಡಿಗಳನ್ನು ಒಳಗೊಂಡಿರುವ ವಿಶೇಷ ಸ್ಮರಣಿಕೆಗಳನ್ನು ಕಳುಹಿಸಲಿದೆ.

ಜನಕಪುರಧಾಮ–ಅಯೋಧ್ಯಾಧಾಮ ಯಾತ್ರೆಯ ಮೂಲಕ ಸ್ಮರಣಿಕೆಗಳನ್ನು ತಲುಪಿಸಲಾಗುವುದು. ಜನವರಿ 18ರಂದು ಆರಂಭವಾಗಲಿರುವ ಈ ಯಾತ್ರೆಯು 20ರಂದು ಅಯೋಧ್ಯೆಯಲ್ಲಿ ಕೊನೆಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.

ಸ್ಮರಣಿಕೆಗಳನ್ನು ಶ್ರೀರಾಮ ಜನ್ಮಭೂಮಿ ರಾಮ ಮಂದಿರ ಟ್ರಸ್ಟ್‌ಗೆ ಹಸ್ತಾಂತರಿಸಲಾಗುವುದು ಎಂದು ಜಾನಕಿ ದೇವಾಲಯದ ಅರ್ಚಕ ರಾಮರೋಶನ್‌ ದಾಸ್‌ ವೈಷ್ಣವ್‌ ತಿಳಿಸಿದ್ದಾರೆ.

ಅಯೋಧ್ಯೆಯಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠಾಪನೆಯು ಜನವರಿ 22ರಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT