ನವದೆಹಲಿ: ವಸತಿ ಪ್ರದೇಶ ಅಥವಾ ಸಾರ್ವಜನಿಕ ಚಟುವಟಿಕೆಗಳ ಕೇಂದ್ರದಿಂದ ಕಲ್ಲು ಗಣಿಗಾರಿಕೆ ಘಟಕಗಳು ಕನಿಷ್ಠ 200 ಮೀಟರ್ ಅಂತರ ಕಾಪಾಡಿಕೊಳ್ಳಬೇಕು ಎಂದು ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಬುಧವಾರ ನಿರ್ದೇಶನ ನೀಡಿದೆ.
ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ನೇತೃತ್ವದ ಪೀಠ ನೀಡಿರುವ ತೀರ್ಮಾನದಂತೆ, ಸ್ಫೋಟ ಚಟುವಟಿಕೆಗಳನ್ನು ನಡೆಸದಿದ್ದಾಗ ಕಲ್ಲು ಕ್ವಾರಿ ಘಟಕಗಳು, ಸಾರ್ವಜನಿಕ ಕಚೇರಿ ಅಥವಾ ವಸತಿ ಪ್ರದೇಶದಿಂದ ಕನಿಷ್ಠ 100 ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ಸಲ್ಲಿಸಿದ ವರದಿಯನ್ನು ಗಮನಿಸಿದ ನಂತರ ಈ ಆದೇಶವನ್ನು ಅಂಗೀಕರಿಸಲಾಗಿದೆ. ಇದು ಗಣಿ ಸುರಕ್ಷತೆಯ ನಿರ್ದೇಶನಾಲಯ ಜನರಲ್ ಸೂಚಿಸಿರುವ ಅಪಾಯ ವಲಯ (500 ಮೀ) ನಿಯಮಗಳನ್ನು ಸಹ ಕಡ್ಡಾಯವಾಗಿ ಪಾಲಿಸಬೇಕು ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದೆ ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆ ಮಾಡಿ.
ಪರಿಸರದ ಮೇಲಿನ ಪರಿಣಾಮವನ್ನು ಕಡಿಮೆಗೊಳಿಸುವುದಕ್ಕಾಗಿ ಗಣಿ ಸುರಕ್ಷತಾ ಪ್ರಧಾನ ನಿರ್ದೇಶನಾಲಯ ಸೂಚಿಸಿರುವ ‘ಅಪಾಯ ವಲಯ‘ದ ನಿಯಮಗಳನ್ನು ಕಲ್ಲು ಗಣಿಗಾರಿಕೆ ಘಟಕಗಳು ಕಡ್ಡಾಯವಾಗಿ ಪಾಲಿಸಬೇಕೆಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮೋದಿ ಸಿದ ವರದಿಯನ್ನು ಪರಿಶೀಲಿಸಿದ ನಂತರ ಹಸಿರು ಪೀಠ ಈ ನಿಯಮಗಳನ್ನು ವಿಧಿಸಿದೆ.