‘ಹೆಡ್ಲಿಗೆ ವೀಸಾ: ರಾಣಾ ನೆರವು’
‘ಮುಂಬೈ ಮೇಲಿನ ದಾಳಿಯ ಮುಖ್ಯ ಸಂಚುಕೋರ ಡೇವಿಡ್ ಕೊಲೆಮನ್ ಹೆಡ್ಲಿಗೆ ಭಾರತದ ವೀಸಾ ಪಡೆಯಲು ರಾಣಾ ನೆರವಾಗಿದ್ದ’ ಎಂದು ಇಲ್ಲಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅಮೆರಿಕದ ಷಿಕಾಗೊದಲ್ಲಿ ಇಮಿಗ್ರೇಷನ್ ಸರ್ವಿಸಸ್ ಕಚೇರಿ ತೆರೆದು ವೀಸಾ ಸಂಬಂಧಿ ಕೆಲಸ ಮಾಡುತ್ತಿದ್ದ ರಾಣಾ ತನ್ನ ಕಚೇರಿಯ ಮೂಲಕ ಹೆಡ್ಲಿಗೆ ಭಾರತದ ವೀಸಾ ಕೊಡಿಸಲು ಸಹಾಯ ಮಾಡಿದ್ದ ಎಂದಿದ್ದಾರೆ.