ಗುರುವಾರ, 18 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಮ ಚಟುವಟಿಕೆಗಳ ಜಾಲ: ಮಹಾರಾಷ್ಟ್ರದಲ್ಲಿ ಒಬ್ಬನ ಬಂಧನ

Published 14 ಜೂನ್ 2024, 14:14 IST
Last Updated 14 ಜೂನ್ 2024, 14:14 IST
ಅಕ್ಷರ ಗಾತ್ರ

ನವದೆಹಲಿ: ಯುವಕರನ್ನು ಹನಿಟ್ರ್ಯಾಪಿಂಗ್‌, ಆನ್‌ಲೈನ್‌ನಲ್ಲಿ ಅಕ್ರಮ ಚಟುವಟಿಕೆ, ಕ್ರೆಡಿಟ್‌ ಕಾರ್ಡ್‌ ವಂಚನೆ ಕೃತ್ಯಕ್ಕೆ ದೂಡುವ ಅಂತರರಾಷ್ಟ್ರೀಯ ಮಾನವ ಕಳ್ಳ ಸಾಗಾಣಿಕೆ ಜಾಲ ನಡೆಸುತ್ತಿರುವ ಪ್ರಮುಖ ಆರೋಪಿ ಸುದರ್ಶನ್‌ ದಾರಡೆ ಅವರನ್ನು ಎನ್‌ಐಎ ಬುಧವಾರ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಬಂಧಿಸಿದೆ.

‘ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ 15 ಜನರನ್ನು ಬಂಧಿಸಲಾಗಿದ್ದು, ಶುಕ್ರವಾರ ಸುದರ್ಶನ್‌ ದಾರಡೆ ಎಂಬವರನ್ನು ಬಂಧಿಸಲಾಗಿದೆ’ ಎಂದು ಎನ್‌ಐಎ ತಿಳಿಸಿದೆ.

‘ಭಾರತದ ಯುವಕರಿಗೆ ಉದ್ಯೋಗದ ಆಮೀಷವೊಡ್ಡಿ ವಿದೇಶಗಳಿಗೆ ಕಳುಹಿಸಿ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುವ ದೊಡ್ಡ ಜಾಲವನ್ನು ದಾರಡೆ ಅವರು ರಚಿಸಿದ್ದರು ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ.

‘ಲಾವೋಸ್‌, ಕಾಂಬೋಡಿಯ ಮತ್ತಿತರ ಸ್ಥಳಗಳಲ್ಲಿ ನಕಲಿ ಕಾಲ್‌ ಸೆಂಟರ್‌ಗಳಲ್ಲಿ ಕೆಲಸ ಮಾಡುವಂತೆ ಯುವಕರನ್ನು ಒತ್ತಾಯಿಸಲಾಗುತ್ತಿತ್ತು. ಭಾರತ, ಅಮೆರಿಕ, ವಿಯೆಟ್ನಾಂ ಕಾಂಬೋಡಿಯ ಸೇರಿ ಹಲವಾರು ಕಡೆಗಳಲ್ಲಿ ಈ ಜಾಲ ಸಕ್ರಿಯವಾಗಿತ್ತು’ ಎಂದು ಎನ್‌ಐಎ ಮಾಹಿತಿ ನೀಡಿದೆ.

ಬಂಧಿತನ ಬಳಿ ಇದ್ದ ಹಲವು ದಾಖಲೆಗಳು, ಡಿಜಿಟಲ್ ಉಪಕರಣಗಳು, ಬ್ಯಾಂಕ್‌ ಖಾತೆಗಳ ಮಾಹಿತಿಯನ್ನು ಎನ್‌ಐಎ ವಶಪಡಿಸಿಕೊಂಡಿದೆ.  

ಸೈಬರ್‌ ವಂಚನೆ, ಕಳ್ಳ ಸಾಗಾಣಿಕೆ ನಡೆಸುತ್ತಿರುವ ಅಂತರರಾಷ್ಟ್ರೀಯ ಜಾಲವೊಂದು ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದ ಪ್ರಕರಣವನ್ನು ಮೇ 13ರಂದು ಎನ್‌ಐಎಗೆ ಹಸ್ತಾಂತರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT