ಚೆನ್ನೈ:ಉಗ್ರರು ನುಸುಳಿರುವ ಸುಳಿವು ದೊರೆತ ಹಿನ್ನೆಲೆಯಲ್ಲಿ ತಮಿಳುನಾಡಿನ ಕೊಯಮತ್ತೂರಿನ ಐದು ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಗುರುವಾರ ಬೆಳಿಗ್ಗೆ ದಾಳಿ ನಡೆಸಿದೆ.

ತಮಿಳುನಾಡು ಪೊಲೀಸರ ಜತೆ ಜಂಟಿ ದಾಳಿ ನಡೆಸಲಾಗಿದ್ದು ಲ್ಯಾಪ್‌ಟಾಪ್, ಮೊಬೈಲ್ ಫೋನ್, ಸಿಮ್ ಕಾರ್ಡ್‌ಗಳು ಮತ್ತು ಪೆನ್‌ಡ್ರೈವ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದುಎಎನ್‌ಐಸುದ್ದಿ ಸಂಸ್ಥೆ ವರದಿ ಮಾಡಿದೆ. ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಮೂಲಗಳು ತಿಳಿಸಿವೆ.

ಲಷ್ಕರ್ ಇ ತೊಯ್ಬಾ (ಎಲ್‌ಇಟಿ) ಉಗ್ರ ಸಂಘಟನೆಯ 6 ಜನರ ತಂಡತಮಿಳುನಾಡಿಗೆ ನುಸುಳಿರುವ ಮಾಹಿತಿ ಇದೆ ಎಂದು ಭಾನುವಾರ (ಆಗಸ್ಟ್ 25ರಂದು) ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಕರಾವಳಿಯ ಉಡುಪಿ, ದಕ್ಷಣ ಕನ್ನಡ ಜಿಲ್ಲೆಗಳಲ್ಲಿಯೂ ಕಟ್ಟೆಚ್ಚರ ಘೋಷಿಸಲಾಗಿತ್ತು.

ಇದನ್ನೂ ಓದಿ:ಎಲ್ಇಟಿಉಗ್ರರು ತಮಿಳುನಾಡುಪ್ರವೇಶಿಸಿರುವ ಶಂಕೆ: ಕರಾವಳಿಯಲ್ಲಿ ಕಟ್ಟೆಚ್ಚರ

ಜುಲೈನಲ್ಲಿಯೂ ತಮಿಳುನಾಡಿನ ಹಲವೆಡೆ ದಾಳಿ ನಡೆಸಿದ್ದ ಎನ್‌ಐಎ, ದೇಶದಲ್ಲಿ ಭಯೋತ್ಪಾದಕ ಕೃತ್ಯ ಎಸಗುವುದಕ್ಕಾಗಿ ನಿಧಿ ಸಂಗ್ರಹಿಸುತ್ತಿದ್ದ ತಂಡವನ್ನು ಪತ್ತೆ ಮಾಡಿತ್ತು. ನಾಗಪಟ್ಟಣಂ ಜಿಲ್ಲೆಯ ಹಲವು ಪ್ರದೇಶಗಳಲ್ಲಿಯೂ ಶೋಧ ನಡೆಸಿತ್ತು.

ಇನ್ನಷ್ಟು...

ಶ್ರೀಲಂಕಾ ಸ್ಫೋಟ: ಕೇರಳ– ತಮಿಳುನಾಡಿನಲ್ಲಿ ನಂಟು, ಮುಂದುವರಿದ ಎನ್‌ಐಎ ಶೋಧ

ಶ್ರೀಲಂಕಾದಲ್ಲಿ ಉಗ್ರ ಕೃತ್ಯ: ತನಿಖೆಯ ಜಾಡು ಹಿಡಿದು ಕಾಸರಗೋಡು ತಲುಪಿದ ಎನ್‌ಐಎ

ಹತ್ಯೆ ಸಂಚು: ಎನ್‌ಐಎ ದಾಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.