ಹೈದರಾಬಾದ್: ವೆನೆಜುವೆಲಾದ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್ ಅವರು ಆಂಧ್ರಪ್ರದೇಶದ ಪುಟ್ಟಪರ್ತಿಯ ಸತ್ಯ ಸಾಯಿಬಾಬಾ ಅವರ ಪರಮ ಭಕ್ತರು.

ಮಡೂರೊ ದಂಪತಿ 2005ರಲ್ಲಿ ಪುಟ್ಟಪರ್ತಿಯಲ್ಲಿರುವ ಸಾಯಿಬಾಬಾ ಅವರ ಆಶ್ರಮ ‘ಪ್ರಶಾಂತಿ ನಿಲಯಂ’ಗೆ ಭೇಟಿ ನೀಡಿ ಸಾಯಿಬಾಬಾ ಅವರ ಆಶೀರ್ವಾದ ಪಡೆದಿದ್ದರು.

ಆ ಸಂದರ್ಭದಲ್ಲಿ ಮಡೂರೊ ವೆನೆಜುವೆಲಾದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಫ್ಲೋರೆಸ್ ಅವರು ಶಾಸಕಾಂಗದ ಅಧ್ಯಕ್ಷರಾಗಿದ್ದರು. ಕಳೆದ ವರ್ಷ ನವೆಂಬರ್ನಲ್ಲಿ ನಡೆದ ಸತ್ಯ ಸಾಯಿಬಾಬಾ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಮಡೂರೊ ಅವರು ವೈಯಕ್ತಿಕ ಸಂದೇಶವನ್ನು ಕಳುಹಿಸಿದ್ದರು ಎಂದು ತಿಳಿದುಬಂದಿದೆ.

‘2005ರಲ್ಲಿ ಮಡೂರೊ ಅವರು ಪತ್ನಿ ಜತೆ ಪ್ರಶಾಂತಿ ನಿಲಯಂಗೆ ಭೇಟಿ ನೀಡಿದ್ದರು. ಮಡೂರೊ ತಮ್ಮ ಕಚೇರಿಯಲ್ಲಿ ಬಾಬಾ ಅವರ ಫೋಟೊ ಇಟ್ಟುಕೊಂಡಿದ್ದಾರೆ’ ಎಂದು 2013ರಲ್ಲಿ ಮಡೂರೊ ಅವರು ವೆನೆಜುವೆಲಾದ ಹಂಗಾಮಿ ಅಧ್ಯಕ್ಷರಾದ ಸಂದರ್ಭದಲ್ಲಿ ಸತ್ಯಸಾಯಿ ಸೆಂಟ್ರಲ್ ಟ್ರಸ್ಟ್ ಹೇಳಿಕೆಯಲ್ಲಿ ತಿಳಿಸಿತ್ತು.

2011ರ ಏಪ್ರಿಲ್ನಲ್ಲಿ ಸತ್ಯ ಸಾಯಿಬಾಬಾ ನಿಧನರಾದಾಗ, ವೆನೆಜುವೆಲಾದ ನ್ಯಾಷನಲ್ ಅಸೆಂಬ್ಲಿಯು ಸಂತಾಪ ಸೂಚಿಸುವ ನಿರ್ಣಯವನ್ನು ಅಂಗೀಕರಿಸಿತ್ತು. ಸಾಯಿಬಾಬಾ ಅವರು ಮಾನವಕುಲಕ್ಕೆ ನೀಡಿದ ಆಧ್ಯಾತ್ಮಿಕ ಕೊಡುಗೆಗಳು ಮತ್ತು ವೆನೆಜುವೆಲಾದ ಜನರ ಮೇಲೆ ಬೀರಿದ ಪ್ರಭಾವವನ್ನು ಗುರುತಿಸಿ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ಘೋಷಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.