ತಿರುವನಂತಪುರ/ಪಾಲಕ್ಕಾಡ್: ಕೇರಳ ರಾಜ್ಯದಲ್ಲಿ ಮೂವರು ನಿಫಾ ಸೋಂಕಿತರ ಜೊತೆ 675 ಮಂದಿಗೆ ಸಂಪರ್ಕ ಇರುವುದು ಪತ್ತೆಯಾಗಿದೆ. ಮಲಪ್ಪುರಂ ಜಿಲ್ಲೆಯಲ್ಲಿ 82 ಮಂದಿಯ ಪರೀಕ್ಷಾ ವರದಿ ನೆಗೆಟಿವ್ (ಸೋಂಕು ತಗುಲಿಲ್ಲ) ಬಂದಿದೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಮಂಗಳವಾರ ತಿಳಿಸಿದ್ದಾರೆ.

ಮಂಗಳವಾರ ಉನ್ನತ ಮಟ್ಟದ ಸಭೆ ನಡೆಸಿದ ವೀಣಾ, ಪಾಲಕ್ಕಾಡ್ನಲ್ಲಿ ಜುಲೈ 12ರಂದು ಪತ್ತೆಯಾದ ಎರಡನೇ ಸೋಂಕಿತ ವ್ಯಕ್ತಿ ಜೊತೆ 178 ಜನರಿಗೆ ಸಂಪರ್ಕ ಇರುವುದು ದೃಢಪಟ್ಟಿದೆ. ಆತ ಇಚ್ಚೀಚಿಗಷ್ಟೇ ಮೃತಪಟ್ಟಿದ್ದರು. ಇತರೆ ಇಬ್ಬರು ಸೋಂಕಿತರು ಮಲಪ್ಪುರಂನವರು ಎಂದು ಮಾಹಿತಿ ನೀಡಿದರು.

ಮಲಪುರಂನ 210, ಪಾಲಕ್ಕಾಡ್ನ 347, ಕೋಯಿಕ್ಕೋಡ್ನ 115, ಎರ್ನಾಕುಲಂನ ಇಬ್ಬರು, ತ್ರಿಶೂರಿನ ಒಬ್ಬರಿಗೆ ಸೋಂಕಿತರೊಂದಿಗೆ ಸಂಪರ್ಕ ಇದೆ.

ರಾಷ್ಟ್ರೀಯ ವೈರಾಣು ಸಂಸ್ಥೆಯ ತಂಡ ಪಾಲಕ್ಕಾಡ್ನಲ್ಲಿ 160 ಬಾವಲಿಗಳ ಮಾದರಿ ಸಂಗ್ರಹ ಮಾಡಿ ಪುಣೆ ಪ್ರಯೋಗಾಲಯಕ್ಕೆ ರವಾನಿಸಿದೆ. ಅಗಲಿಯ ಕಲ್ಲಮಲಾಗೂ ತಂಡ ಭೇಟಿ ನೀಡಿ ಪರಿಶೀಲಿಸಿದೆ ಎಂದು ಪಾಲಕ್ಕಾಡ್ ಜಿಲ್ಲಾಡಳಿತ ತಿಳಿಸಿದೆ.

ವಯನಾಡು ಸೇರಿದಂತೆ 6 ಜಿಲ್ಲೆಗಳ ಆಸ್ಪತ್ರೆಗಳಲ್ಲಿ ನಿಫಾ ಮುನ್ನೆಚ್ಚರಿಕೆ ಘೋಷಿಸಿದ್ದು, ತೀವ್ರ ಜ್ವರ ಅಥವಾ ನಿಫಾ ಲಕ್ಷಣವುಳ್ಳವರ ವರದಿ ನೀಡಲು ಆರೋಗ್ಯ ಸಚಿವರು ಸೂಚಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.