ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟ್ನಾಯಕ್‌ ಭೇಟಿಯಾದ ನಿತೀಶ್‌: ಮೈತ್ರಿಯ ಕುರಿತು ಚರ್ಚೆ ನಡೆದಿಲ್ಲ ಎಂದ ನಾಯಕರು

Published 9 ಮೇ 2023, 14:32 IST
Last Updated 9 ಮೇ 2023, 14:32 IST
ಅಕ್ಷರ ಗಾತ್ರ

ಭುವನೇಶ್ವರ (ಪಿಟಿಐ): ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹಾಗೂ ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ಇಲ್ಲಿನ ‘ನವೀನ್‌ ನಿವಾಸ’ದಲ್ಲಿ ಮಂಗಳವಾರ ಭೇಟಿಯಾಗಿದ್ದು, ‘ಲೋಕಸಭಾ ಚುನಾವಣೆಗೆ ಜೆಡಿಯು ಮತ್ತು ಬಿಜೆಡಿ ಪಕ್ಷಗಳ ಮೈತ್ರಿಯ ಕುರಿತು ಮಾತುಕತೆ ನಡೆಸಿಲ್ಲ’ ಎಂದು ಇಬ್ಬರೂ ನಾಯಕರು ಬಳಿಕ ತಿಳಿಸಿದ್ದಾರೆ.

‘ಮೈತ್ರಿಯ ಕುರಿತು ಯಾವುದೇ ಚರ್ಚೆ ನಡೆಸಿಲ್ಲ. ನಿತೀಶ್‌ ಅವರು ಇಲ್ಲಿಗೆ ಬಂದಿದ್ದರ ಬಗ್ಗೆ ನನಗೆ ಖುಷಿ ಇದೆ. ನಾವು ಬಹಳ ಹಳೆಯ ಸ್ನೇಹಿತರು. ವಾಜಪೇಯಿ ಅವರ ಸಂಪುಟದಲ್ಲಿ ಸಚಿವರಾಗಿದ್ದವರು’ ಎಂದು ನವೀನ್‌ ಪಟ್ನಾಯಕ್‌ ಹೇಳಿದರು.

ಪುರಿ ಜಗನ್ನಾಥನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಕಟ್ಟಡ ಸೌಲಭ್ಯ ಕಲ್ಪಿಸಿಕೊಡುವ ಸಲುವಾಗಿ, ಬಿಹಾರ ಸರ್ಕಾರಕ್ಕೆ ಪುರಿಯಲ್ಲಿ 1.5 ಎಕರೆ ಪ್ರದೇಶವನ್ನು ಉಚಿತವಾಗಿ ನೀಡುವುದಾಗಿ ನವೀನ್‌ ಪಟ್ನಾಯಕ್‌ ತಿಳಿಸಿದರು.

ಇಬ್ಬರ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿವಿಧ ಪಕ್ಷಗಳನ್ನು ಒಗ್ಗೂಡಿಸುವ ಕುರಿತು ನಿತೀಶ್‌ ಕುಮಾರ್‌ ಅವರು ಹಲವು ನಾಯಕರನ್ನು ಕೆಲವು ತಿಂಗಳುಗಳಿಂದ ಭೇಟಿಯಾಗುತ್ತಿದ್ದಾರೆ. ಈ ಹೊತ್ತಿನಲ್ಲಿ ಈ ಇಬ್ಬರು ನಾಯಕರ ಭೇಟಿ ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT