ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಟಿಆರ್‌ಪಿ ಪ್ರಕರಣ: ಚಾರ್ಜ್‌ಶೀಟ್‌ನಲ್ಲಿ ಅರ್ನಾಬ್‌ ವಿರುದ್ಧ ಸಾಕ್ಷಿಗಳಿಲ್ಲ

ಹೈಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದ ಔಟ್‌ಲಿಯರ್ ಮೀಡಿಯಾ
Last Updated 10 ಫೆಬ್ರುವರಿ 2021, 11:00 IST
ಅಕ್ಷರ ಗಾತ್ರ

ಮುಂಬೈ: ನಕಲಿ ಟೆಲಿವಿಷನ್ ರೇಟಿಂಗ್ ಪಾಯಿಂಟ್‌ (ಟಿಆರ್‌ಪಿ) ಪ್ರಕರಣದ ಆರೋಪಿಯಾಗಿರುವ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮುಂಬೈ ಪೊಲೀಸರು ‌ಸಲ್ಲಿಸಿರುವ ದೋಷಾರೋಪ ಪಟ್ಟಿಯಲ್ಲಿ ಯಾವುದೇ ಪುರಾವೆಗಳನ್ನು ಬಹಿರಂಗಪಡಿಸಿಲ್ಲ ಎಂದು ರಿಪಬ್ಲಿಕ್ ಟಿವಿ ಚಾನೆಲ್‌ ನಡೆಸುತ್ತಿರುವ ಎಆರ್‌ಟಿ ಔ‌ಟ್‌ಲಿಯರ್ ಮೀಡಿಯಾ, ಬಾಂಬೆ ಹೈಕೋರ್ಟ್‌ಗೆ ತಿಳಿಸಿದೆ.

ಪೊಲೀಸರು‌ ಸಲ್ಲಿಸಿರುವ ದೋಷಾರೋಪ ಪಟ್ಟಿಗೆ ಪ್ರತಿಯಾಗಿ ಪ್ರಮಾಣ ಪತ್ರದ ಮೂಲಕ ಸ್ಪಷ್ಟನೆ ನೀಡಿರುವ ಕಂಪನಿ , ‘ಈ ಪ್ರಕರಣದಲ್ಲಿ ನಮ್ಮ ನೌಕರರನ್ನು ತಪ್ಪಾಗಿ ಸೇರಿಸಿದ್ದಾರೆ‘ ಎಂದು ಹೇಳಿದೆ.

‘ಇಡೀ ಪ್ರಕರಣದಲ್ಲಿ ನಮ್ಮ ವಾಹಿನಿ ಮತ್ತು ನೌಕರರ ವಿರುದ್ಧ ದುರುದ್ದೇಶಪೂರಿತ ಆರೋಪ ಮಾಡಲಾಗಿದ್ದು, ಅದು ರಾಜಕೀಯ ದ್ವೇಷದಿಂದ ಕೂಡಿದೆ‘ ಎಂದು ಕಂಪನಿ ಹೇಳಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಮತ್ತು ಪಾಲ್ಘರ್ ಹತ್ಯೆ ಪ್ರಕರಣ ಕುರಿತು ಮಹಾರಾಷ್ಟ್ರ ಪೊಲೀಸರು ನಡೆಸುತ್ತಿದ್ದ ತನಿಖೆ ಬಗ್ಗೆ ರಿಪಬ್ಲಿಕ್‌ ಟಿವಿ ನಿರ್ಭಯವಾಗಿ ವರದಿ ಮಾಡಿದ್ದಕ್ಕಾಗಿ, ನಮ್ಮ ಕಂಪನಿಯ ನೌಕರರನ್ನು ಗುರಿ ಮಾಡಿ, ಈ ರೀತಿ ಆರೋಪ ಹೊರಿಸಲಾಗುತ್ತಿದೆ ಎಂದು ಮೀಡಿಯಾ ಕಂಪನಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT