ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ನೇ ತರಗತಿವರೆಗೆ ಲಿಖಿತ ಪರೀಕ್ಷೆ ಬೇಡ: ಎನ್‌ಸಿಎಫ್ ಕರಡು

Last Updated 7 ಏಪ್ರಿಲ್ 2023, 12:28 IST
ಅಕ್ಷರ ಗಾತ್ರ

ನವದೆಹಲಿ: ಪರೀಕ್ಷೆಗಳು 2ನೇ ತರಗತಿವರೆಗಿನ ಮಕ್ಕಳಿಗೆ ಸೂಕ್ತವಲ್ಲದ ಮೌಲ್ಯಮಾಪನ ಸಾಧನಗಳಾಗಿವೆ. 3ನೇ ತರಗತಿಯಿಂದ ಲಿಖಿತ ಪರೀಕ್ಷೆಗಳನ್ನು ಪರಿಚಯಿಸಬೇಕು ಹಾಗೂ ಮೌಲ್ಯಮಾಪನ ವಿಧಾನಗಳು ಮಕ್ಕಳಿಗೆ ಹೆಚ್ಚುವರಿ ಹೊರೆಯನ್ನುಂಟು ಮಾಡದಂತೆ ಇರಬೇಕು ಎಂದು ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (ಎನ್‌ಸಿಎಫ್‌ ) ಶಿಫಾರಸು ಮಾಡಿದೆ.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಪರಿಷ್ಕರಿಸಲಾಗುತ್ತಿದೆ.

ಪರೀಕ್ಷೆಗಳು ಅಡಿಪಾಯ ಹಂತಕ್ಕೆ (ಪ್ರಿಸ್ಕೂಲ್ ನಿಂದ 2 ನೇ ತರಗತಿಯವರೆಗೆ) ಸಂಪೂರ್ಣವಾಗಿ ಸೂಕ್ತವಲ್ಲದ ಮೌಲ್ಯಮಾಪನ ಸಾಧನಗಳಾಗಿವೆ ಎಂದು ಎನ್‌ಸಿಎಫ್‌ ಕರಡಿನಲ್ಲಿ ಹೇಳಲಾಗಿದೆ.

ಮಗುವಿನ ಕಲಿಕಾ ಪ್ರಕ್ರಿಯೆಯ ಮೇಲ್ವಿಚಾರಣೆ ನಡೆಸಬೇಕು ಹಾಗೂ ಕಲಿಕೆ ಸಂದರ್ಭದಲ್ಲಿ ಮಗುವು ರಚಿಸುವ ಕಲಾಕೃತಿಗಳನ್ನು ವಿಶ್ಲೇಷಣೆ ಮಾಡಬೇಕು. ಇವು ಎರಡು ಪ್ರಮುಖ ಮೌಲ್ಯಮಾಪನ ವಿಧಾನಗಳು ಎಂದೂ ಕರಡಿನಲ್ಲಿ ಹೇಳಲಾಗಿದೆ.

‘ಮೌಲ್ಯಮಾಪನವು ಮಕ್ಕಳಲ್ಲಿ ಮತ್ತು ಅವರ ಕಲಿಕೆಯಲ್ಲಿ ವೈವಿಧ್ಯತೆಗೆ ಅವಕಾಶ ನೀಡಬೇಕು. ಶಿಕ್ಷಕರು ಸಹ ವಿವಿಧ ರೀತಿಯ ಮೌಲ್ಯಮಾಪನಗಳನ್ನು ಬಳಸಿ, ವಿದ್ಯಾರ್ಥಿಗಳ ಕಲಿಕೆಯನ್ನು ಒರೆಗೆ ಹಚ್ಚಬೇಕು’ ಎಂದೂ ಹೇಳಲಾಗಿದೆ.

3 ರಿಂದ 5 ನೇ ತರಗತಿ ಹಂತದಲ್ಲಿ ಲಿಖಿತ ಪರೀಕ್ಷೆಗಳನ್ನು ಪರಿಚಯಿಸಬೇಕು ಎಂದೂ ಕರಡಿಯಲ್ಲಿ ಶಿಫಾರಸು ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT