ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಯ್ಡಾ: ಕಸದ ರಾಶಿಯಲ್ಲಿದ್ದ ಪಟಾಕಿ ಸಿಡಿದು 3 ಮಕ್ಕಳಿಗೆ ಗಾಯ

Published 21 ಅಕ್ಟೋಬರ್ 2023, 14:07 IST
Last Updated 21 ಅಕ್ಟೋಬರ್ 2023, 14:07 IST
ಅಕ್ಷರ ಗಾತ್ರ

ನೊಯ್ಡಾ: ಕಸದ ರಾಶಿಯಲ್ಲಿದ್ದ ಪಟಾಕಿ ಸಿಡಿದು ಮೂರು ಮಕ್ಕಳು ಗಾಯಗೊಂಡ ಘಟನೆ ನೊಯ್ಡಾದಲ್ಲಿ ಶನಿವಾರ ನಡೆದಿದೆ.

ಸೆಕ್ಟರ್‌ 24ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸೆಕ್ಟರ್‌ 22ರ ಸ್ಲಮ್ ಒಂದರ ಬಳಿ ಬೆಳಿಗ್ಗೆ 10 ಗಂಟೆಗೆ ಈ ಘಟನೆ ಸಂಭವಿಸಿದೆ.

ಗಾಯಗೊಂಡಿರುವ ಮೂವರು ಸಹೋದರರಾಗಿದ್ದು, ಕಸದ ರಾಶಿಯ ಬಳಿ ಆಟ ಆಡುವ ವೇಳೆ ಏಕಾಏಕಿ ಪಟಾಕಿ ಸಿಡಿದಿದೆ. ಇದರಿಂದ ಮಕ್ಕಳು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಶಾನಿಬ (2), ಮೆಹರ್‌ಬ (1.5) ಹಾಗೂ ಇತೆಶಾಮ್ (5) ಅವರ ಕೈ ಹಾಗೂ ಕಾಲುಗಳಿಗೆ ಗಾಯಗಳಾಗಿವೆ.

ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ತನಿಖೆ ಜಾರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT