ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಲೋಪಗಳು ಕಂಡುಬಂದರೆ ಸಿಯುಇಟಿ–ಯುಜಿ ಮರುಪರೀಕ್ಷೆ

Published 7 ಜುಲೈ 2024, 15:27 IST
Last Updated 7 ಜುಲೈ 2024, 15:27 IST
ಅಕ್ಷರ ಗಾತ್ರ

ನವದೆಹಲಿ: ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಯುಇಟಿ –ಯುಜಿ) ಬಗೆಗಿನ ಆರೋಪಗಳು ಸಾಬೀತಾದರೆ  ಜುಲೈ 15ರಿಂದ 19ರವರೆಗೆ ಮರು ಪರೀಕ್ಷೆಯನ್ನು ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಭಾನುವಾರ ತಿಳಿಸಿದೆ

ಸಾರ್ವಜನಿಕರು ತಿಳಿಸಿರುವ ಲೋಪಗಳನ್ನು ಸರಿಪಡಿಸಿಕೊಂಡು ಸಿಯುಇಟಿ–ಯುಜಿ ಮರುಪರೀಕ್ಷೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದರೊಂದಿಗೆ ಪದವಿ ಪೂರ್ವ ಪ್ರವೇಶ ಪರೀಕ್ಷೆಯ ಉತ್ತರಗಳನ್ನು  ಪ್ರಕಟಿಸಿರುವ ಎನ್‌ಟಿಎ, ಕೀ ಉತ್ತರಗಳ ಬಗ್ಗೆ ಆಕ್ಷೇಪವಿದ್ದರೆ ಜುಲೈ 9 ರಂದು ಸಂಜೆ 6 ಗಂಟೆಯಿಂದ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ‌.  

‘ಅಭ್ಯರ್ಥಿಗಳು ಎತ್ತಿರುವ ಪ್ರಶ್ನೆಗಳ ಬಗ್ಗೆ ವಿಷಯ ತಜ್ಞರ ಸಮಿತಿಯು ಪರಿಶೀಲನೆ ನಡೆಸುತ್ತಿದೆ. ಪರಿಷ್ಕೃತ ಕೀ ಉತ್ತರದ ಆಧಾರದಲ್ಲಿ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ತಿಳಿಸಿದ್ದಾರೆ.

ನೀಟ್‌, ನೆಟ್‌ಗಳಂತಹ ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿರುವ ಹಿನ್ನೆಲೆ ಸಿಯುಇಟಿ–ಯುಜಿಯ ಫಲಿತಾಂಶ ಬಿಡುಗಡೆ ವಿಳಂಬವಾಗಿದೆ.

ಎನ್‌ಟಿಯು ಮೇ 16ರಿಂದ ದೇಶದಾದ್ಯಂತ ಸಿಯುಇಟಿ –ಯುಜಿ ಪರೀಕ್ಷೆ ನಡೆಸಿತ್ತು, ಆದರೆ ತಾಂತ್ರಿಕ ದೋಷಗಳಿಂದ ದೆಹಲಿಯಲ್ಲಿ ಪರೀಕ್ಷೆಯನ್ನು ಕೆಲ ದಿನಗಳ ಬಳಿಕ ನಡೆಸಲಾಗಿತ್ತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT