ನವದೆಹಲಿ: ಕೋವಿಡ್ ರೂಪಾಂತರ ಓಮೈಕ್ರಾನ್ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈಗಾಗಲೇ 400ರ ಗಡಿ ದಾಟಿದೆ. ಇದುವರೆಗೆ ಭಾರತದಲ್ಲಿ ಒಟ್ಟು 415 ಓಮೈಕ್ರಾನ್ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 115 ಮಂದಿ ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಬಿಡುಗಡೆ ಮಾಡಿದ ಕೋವಿಡ್ ವರದಿಯಲ್ಲಿ ತಿಳಿಸಿದೆ.

ಮಹಾರಾಷ್ಟ್ರದಲ್ಲಿ ಅತಿಹೆಚ್ಚು 108 ಓಮೈಕ್ರಾನ್ ಪ್ರಕರಣಗಳು ದೃಢಪಟ್ಟಿವೆ. ನಂತರ ದೆಹಲಿಯಲ್ಲಿ 79, ಗುಜರಾತ್‌ನಲ್ಲಿ 43, ತೆಲಂಗಾಣದಲ್ಲಿ 38, ಕೇರಳದಲ್ಲಿ 37, ತಮಿಳುನಾಡಿನಲ್ಲಿ 34 ಮತ್ತು ಕರ್ನಾಟಕದಲ್ಲಿ 31 ಓಮೈಕ್ರಾನ್ ಕೇಸ್‌ಗಳು ವರದಿಯಾಗಿವೆ.

ಮತ್ತೊಂದೆಡೆ ಕೋವಿಡ್ ಸೋಂಕಿನ ಪ್ರಮಾಣವೂ ಹೆಚ್ಚಾಗುತ್ತಿದ್ದು, ಕಳೆದ 24 ಗಂಟೆಯ ಅವಧಿಯಲ್ಲಿ ದೇಶದಾದ್ಯಂತ ಒಟ್ಟು 7,189 ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಒಟ್ಟು ಕೋವಿಡ್ ಸೋಂಕಿತ ಸಂಖ್ಯೆ 3,47,79,815ಕ್ಕೆ ಏರಿಕೆಯಾಗಿದೆ. ಒಟ್ಟಾರೆ ದೇಶದಲ್ಲಿ 77,032 ಸಕ್ರಿಯ ಕೋವಿಡ್ ಪ್ರಕರಣಗಳು ಇವೆ.

ಓಮೈಕ್ರಾನ್ ಆತಂಕ | ಚುನಾವಣಾ ರ್ಯಾಲಿಗಳನ್ನು ನಿಲ್ಲಿಸಿ: ಅಲಹಾಬಾದ್ ಹೈಕೋರ್ಟ್

ಕೋವಿಡ್ ಕಾರಣದಿಂದ 387 ಮಂದಿ ಮೃತರಾಗಿದ್ದಾರೆ. ಇದುವರೆಗೆ ದೇಶದಲ್ಲಿ 4,79,520 ಮಂದಿ ಕೊರೊನಾ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ದೈನಂದಿನ ಪ್ರಕರಣಗಳ ಸಂಖ್ಯೆಯನ್ನು ಹೋಲಿಸಿದರೆ 58 ದಿನಗಳಿಂದ 15,000ಕ್ಕಿಂತ ಕಡಿಮೆ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಇದುವರೆಗೆ 3,42,23,263 ಮಂದಿ ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಮರಣ ಪ್ರಮಾಣವು ಶೇಕಡಾ 1.38 ಇದೆ.

'ಜಗತ್ತಿನಾದ್ಯಂತ ಕೋವಿಡ್ 4ನೇ ಅಲೆ: ದೇಶದಲ್ಲಿ 358 ಓಮೈಕ್ರಾನ್ ಪ್ರಕರಣ'

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.