ನವದೆಹಲಿ: ಆಪರೇಷನ್ ಸಿಂಧೂರ ಕೇವಲ ಸಶಸ್ತ್ರ ಪಡೆಗಳ ಕಾರ್ಯಾಚರಣೆಯಲ್ಲ. ಬದಲಾಗಿ ಜಗತ್ತಿಗೆ ಭಾರತದ ದೃಢನಿಶ್ಚಯ, ಧೈರ್ಯ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶದ ಶಕ್ತಿಯನ್ನು ಪ್ರತಿಬಿಂಬಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ತಿಳಿಸಿದ್ದಾರೆ.

ಮಾಸಿಕ ರೆಡಿಯೊ ಕಾರ್ಯಕ್ರಮ ‘ಮನದ ಮಾತು‘ವಿನಲ್ಲಿ (ಮನ್ ಕಿ ಬಾತ್) ಮಾತನಾಡಿದ ಮೋದಿ, ‘ಇಂದು ಇಡೀ ದೇಶವು ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಾಗಿದೆ, ಭಯೋತ್ಪಾದನೆಯ ವಿರುದ್ಧದ ಜಾಗತಿಕ ಹೋರಾಟಕ್ಕೆ ಆಪರೇಷನ್ ಸಿಂಧೂರ ಹೊಸ ತಿರುವು ನೀಡಿದೆ ಎಂದು ಹೇಳಿದ್ದಾರೆ.

ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಸಶಸ್ತ್ರ ಪಡೆ ನಡೆಸಿದ ಕಾರ್ಯಾಚರಣೆಯು ಅಸಾಧಾರಣ ಎಂದು ಶ್ಲಾಘಿಸಿದ್ದಾರೆ.
.NDA ಸಭೆ | ಸಶಸ್ತ್ರ ಪಡೆಗಳ ಶೌರ್ಯ, ಮೋದಿ ನಾಯಕತ್ವ ಶ್ಲಾಘಿಸುವ ನಿರ್ಣಯ ಅಂಗೀಕಾರ.ಅಯೋಧ್ಯೆಯ ರಾಮಮಂದಿರ, ಹನುಮಾನ್ ದೇವಸ್ಥಾನಕ್ಕೆ ವಿರಾಟ್-ಅನುಷ್ಕಾ ಭೇಟಿ.
ಆಪರೇಷನ್ ಸಿಂಧೂರ ನಮ್ಮ ದೃಢನಿಶ್ಚಯ, ಧೈರ್ಯ ಮತ್ತು ಬದಲಾಗುತ್ತಿರುವ ಭಾರತದ ಚಿತ್ರಣವಾಗಿದೆ. ಕಾರ್ಯಾಚರಣೆಯ ಯಶಸ್ಸಿನ ನಂತರ, ಸಾಮಾಜಿಕ ಮಾಧ್ಯಮದಲ್ಲಿ ದೇಶಭಕ್ತಿಯ ಕವಿತೆಗಳಿಂದ ಹಿಡಿದು ಮಕ್ಕಳ ರಚಿಸಿದ ವರ್ಣಚಿತ್ರಗಳು, ಬೃಹತ್ ತಿರಂಗ ಯಾತ್ರೆಗಳು ಯೋಧರ ಶೌರ್ಯ, ಸಾಹಸಗಳ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಮೋದಿ ಹೇಳಿದ್ದಾರೆ.

ಕಟಿಹಾರ್ ಮತ್ತು ಕುಶಿನಗರದಂತಹ ನಗರಗಳಲ್ಲಿ ಪೋಷಕರು ತಮ್ಮ ನವಜಾತ ಶಿಶುಗಳಿಗೆ (ಸೇನಾ) ಕಾರ್ಯಾಚರಣೆಯ ಗೌರವಾರ್ಥವಾಗಿ ‘ಸಿಂಧೂರ‘ ಎಂದು ಹೆಸರಿಟ್ಟಿದ್ದಾರೆ ಎಂದು ಮೋದಿ ತಿಳಿಸಿದ್ದಾರೆ.

ಆತ್ಮನಿರ್ಭರ ಭಾರತದ ಸಂಕಲ್ಪದೊಂದಿಗೆ ಸ್ವದೇಶಿ ರಕ್ಷಣಾ ಸಾಮರ್ಥ್ಯವು ಸಹ ಸೇನಾ ಕಾರ್ಯಾಚರಣೆಯ ಯಶಸ್ಸಿಗೆ ಕಾರಣ ಎಂದು ಪ್ರಧಾನಿ ಹೇಳಿದ್ದಾರೆ.
.IPL 2025 GT v CSK | ಚೆನ್ನೈಗೆ ಕೊನೆ ಪಂದ್ಯದಲ್ಲಿ ಗೆಲುವಿನ ಸಮಾಧಾನ.ನಕಲಿ ವರದಿ ಸೃಷ್ಟಿ |ಲಂಚ ಪಡೆಯುತ್ತಿದ್ದ ವೇಳೆ ಸಿಬಿಐ ಬಲೆಗೆ ಬಿದ್ದ ಡಾಕ್ಟರ್.
ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಇದಕ್ಕೆ ಪ್ರತೀಕಾರವಾಗಿ ಭಾರತ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ 'ಆಪರೇಷನ್ ಸಿಂಧೂರ' ನಡೆಸುವ ಮೂಲಕ ತಕ್ಕ ಉತ್ತರ ನೀಡಿತ್ತು.

ಭಾರತವು ಪಾಕಿಸ್ತಾನದ ವಿವಿಧ ನಗರಗಳನ್ನು ಗುರಿಯಾಗಿಸಿ ದಾಳಿ ನಡೆಸುವ ಮೂಲಕ ಪಾಕ್ಗೆ ತಿರುಗೇಟು ನೀಡಿತ್ತು. ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಪಂಜಾಬ್, ಗುಜರಾತ್. ರಾಜಸ್ಥಾನ ಗಡಿ ಪ್ರದೇಶಗಳಲ್ಲಿ ಪಾಕಿಸ್ತಾನದಿಂದ ನಡೆದ ದಾಳಿಗೂ ಭಾರತೀಯ ಸೇನೆ ದಿಟ್ಟ ಪ್ರತಿರೋಧ ಒಡ್ಡಿತ್ತು.
.ಅಸ್ಸಾಂ | ₹11.5 ಕೋಟಿ ಮೌಲ್ಯದ ಮಾದಕ ದ್ರವ್ಯ ವಶ, ನಾಲ್ವರ ಬಂಧನ.ರಿಯಲ್ ಎಸ್ಟೇಟ್ನವರಿಗಾಗಿ ರಾಮನಗರದ ಹೆಸರು ಬದಲಾವಣೆ: ವಿಜಯೇಂದ್ರ.Chikkamagaluru Rains | ಭಾರಿ ಮಳೆ: ಹಳ್ಳಕ್ಕೆ ಉರುಳಿದ ಕಾರುಗಳು.Pahalgam Attack | ಮಂಜುನಾಥ ನಿವಾಸಕ್ಕೆ ಅಸ್ಸಾಂ ಸಚಿವ ಭೇಟಿ, ₹5 ಲಕ್ಷ ಪರಿಹಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.