ಸೋಮವಾರ, 16 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಣಕಾಸು ವಂಚನೆ ಆರೋಪ: ಪದ್ಮಶ್ರಿ ಪುರಸ್ಕೃತ ಸುಂದರ್‌ ಮೆನನ್‌ ಬಂಧನ

Published : 6 ಆಗಸ್ಟ್ 2024, 13:42 IST
Last Updated : 6 ಆಗಸ್ಟ್ 2024, 13:42 IST
ಫಾಲೋ ಮಾಡಿ
Comments

ತ್ರಿಶೂರ್‌ (ಕೇರಳ): ಹಣಕಾಸು ವಂಚನೆ ಆರೋಪದಡಿ ಕೇರಳದ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಸುಂದರ್‌.ಸಿ.ಮೆನನ್‌ ಅವರನ್ನು ಪೊಲೀಸರು ಬಂಧಿಸಿದ್ದಾರೆ.

‘ಮೆನನ್‌ ಅವರನ್ನು ಭಾನುವಾರ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಬಳಿಕ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ’ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. 

‘ಎರಡು ಕಂಪನಿಗಳ ಹೆಸರಿನಲ್ಲಿ 62 ಜನರಿಂದ ಠೇವಣಿ ಸ್ವೀಕರಿಸಿ, ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೆನನ್‌ ಅವರ ಮೇಲೆ ಪಶ್ಚಿಮ ಪೊಲೀಸ್‌ ಠಾಣೆಯಲ್ಲಿ 18 ಪ್ರಕರಣಗಳು ದಾಖಲಾಗಿದ್ದವು. ಬಳಿಕ ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

‘ಮೆನನ್ ಅವರು ಜನರಿಂದ ಒಟ್ಟು ₹7.78 ಕೋಟಿ ಹಣ ಪಡೆದುಕೊಂಡಿದ್ದಾರೆ. ಆದರೆ ಯೋಜನೆಯ ಅವಧಿ ಮುಗಿದ ಬಳಿಕ ಹಣವನ್ನು ಮರುಪಾವತಿಸಿಲ್ಲ ಎಂಬ ಆರೋಪ ಕೇಳಿಬಂದಿದೆ. ರಿಸರ್ವ್‌ ಬ್ಯಾಂಕ್‌ ನಿಯಮಗಳನ್ನು ಉಲ್ಲಂಘಿಸಿರುವ ಮತ್ತು ಜನರಿಗೆ ವಂಚಿಸಿರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ತ್ರಿಶೂರ್‌ ಪೂರಂ ಹಬ್ಬದ ಆಯೋಜಕ ಸಂಸ್ಥೆಗಳಲ್ಲಿ ಒಂದಾದ ತಿರುವಂಬಾಡಿ ದೇವಸಂನ ಅಧ್ಯಕ್ಷರಾಗಿರುವ ಮೆನನ್‌ ಅವರಿಗೆ 2016ರಲ್ಲಿ ಪದ್ಮಶ್ರೀ ‍ಪುರಸ್ಕಾರ ಲಭಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT