ಕಾನ್ಪುರ: ಜಮ್ಮು ಮತ್ತು ಕಾಶ್ಮಿರದ ಪಹಲ್ಗಾಮ್ನಲ್ಲಿ ಏ.22ರಂದು ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಶುಭಂ ದ್ವಿವೇದಿ ಕುಟುಂಬವನ್ನು ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ ಭೇಟಿಯಾದರು.

ಪ್ರಧಾನಿ ಮೋದಿಯನ್ನು ನೋಡುತ್ತಿದ್ದಂತೆ ಮೃತ ಶುಭಂ ಕುಟುಂಬ ಸದಸ್ಯರು ಕಣ್ಣೀರಾದರು. ಇದೊಂದು ಭಾವನಾತ್ಮಕ ಭೇಟಿಯಾಗಿತ್ತು. ಮೋದಿಯವರೂ ಗದ್ಗದಿತರಾದರು. ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದರು. ಭಯೋತ್ಪಾದನೆಯ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಪ್ರಧಾನಿ ಅವರು ಧೈರ್ಯ ತುಂಬಿರುವುದಾಗಿ ಶುಭಂ ಅವರ ಸಹೋದರ ಸೌರವ್ ದ್ವಿವೇದಿ ಹೇಳಿದ್ದಾರೆ.

ಇದೇ ವರ್ಷ ಫೆಬ್ರುವರಿ 12ರಂದು ವಿವಾಹವಾಗಿದ್ದ 31ರ ಹರೆಯದ ದ್ವಿವೇದಿಯವರನ್ನು, ಪಹಲ್ಗಾಮ್ನಲ್ಲಿ ಹೆಂಡತಿ ಅಶ್ನಯ ಅವರ ಮುಂದೆಯೇ ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದರು.
.ಹಣ ಅಥವಾ ಉದ್ಯೋಗ ಬೇಕಾಗಿಲ್ಲ, ಪತಿಗೆ ಹುತಾತ್ಮ ಸ್ಥಾನಮಾನ ನೀಡಬೇಕು: ಶುಭಂ ಪತ್ನಿ.ಕಾನ್ಪುರ: ಉದ್ಯಾನ, ಚೌಕಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ದ್ವಿವೇದಿ ಹೆಸರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.