ಕಾನ್ಪುರ: ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಸಾವಿಗೀಡಾದ ಶುಭಂ ದ್ವಿವೇದಿ ಅವರ ಹೆಸರನ್ನು ಶ್ಯಾಮ್ನಗರದ ಒಂದು ಉದ್ಯಾನ ಹಾಗೂ ಚೌಕಕ್ಕೆ ಇಡಲಾಗುವುದು ಎಂದು ಕಾನ್ಪುರ ನಗರ ಮೇಯರ್ ಪ್ರಮೀಳಾ ಪಾಂಡೆ ಶನಿವಾರ ತಿಳಿಸಿದ್ದಾರೆ.

ಇದೇ ವರ್ಷ ಫೆಬ್ರುವರಿ 12ರಂದು ವಿವಾಹವಾಗಿದ್ದ 31ರ ಹರೆಯದ ದ್ವಿವೇದಿಯವರನ್ನು, ಪಹಲ್ಗಾಮ್ನಲ್ಲಿ ಹೆಂಡತಿ ಅಶ್ನಯ ಅವರ ಮುಂದೆಯೇ ಉಗ್ರರು ಗುಂಡಿಕ್ಕಿ ಕೊಲೆ ಮಾಡಿದ್ದರು.
.ಪಹಲ್ಗಾಮ್ನಲ್ಲಿ ನಡೆದ ದಾಳಿಗೆ ಖಂಡನೆ: ರಸ್ತೆ ಮೇಲೆ ಪಾಕ್ ಧ್ವಜ ಅಂಟಿಸಿ ಆಕ್ರೋಶ.
‘ಪಹಲ್ಗಾಮ್ನಲ್ಲಿ ಉಗ್ರರ ಗುಂಡಿನ ದಾಳಿಯಿಂದ ಸಾವಿಗೀಡಾದ ಶುಭಂ ದ್ವಿವೇದಿ ಅವರ ಹೆಸರನ್ನು ಶ್ಯಾಮ್ನಗರದ ಉದ್ಯಾನ ಹಾಗೂ ಚೌಕವೊಂದಕ್ಕೆ ಇಡಲು ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ (ಕೆಎಂಸಿ) ನಿರ್ಧರಿಸಿದೆ’ ಎಂದು ಪಾಂಡೆ ತಿಳಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಶನ್ಯಾ ಬಯಸಿದರೆ ಅವರಿಗೆ ಕಾನ್ಪುರ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಹೊರಗುತ್ತಿಗೆ ಉದ್ಯೋಗ ನೀಡಲಾಗುವುದು ಎಂದು ಹೇಳಿದ್ದಾರೆ.
.ಪಹಲ್ಗಾಮ್ ಭಯೋತ್ಪಾದಕರ ದಾಳಿ ಖಂಡಿಸಿದ ಕರ್ನಾಟಕ ಮುಸ್ಲಿಂ ಮುತ್ತಹದ್ ಮಹಜ್ .
ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಕೆಎಂಸಿ ಪ್ರಧಾನ ಕಚೇರಿಯಿಂದ ಮೋತಿಜೀಲ್ವರೆಗೆ ಮೇಯರ್, ಬಿಜೆಪಿ ಕೌನ್ಸಿಲರ್ಗಳು ಹಾಗೂ ಕಾರ್ಯಕರ್ತರು ಮೆರವಣಿಗೆ ನಡೆಸಿದರು.

ಪ್ರತಿಭಟನಾಕಾರರು ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಶರೀಫ್ ಹಾಗೂ ಸೇನಾ ಮುಖ್ಯಸ್ಥ ಆಸಿಫ್ ಮುನೀರ್ ಅವರ ಪ್ರತಿಕೃತಿ ದಹಿಸಿ ಆಕ್ರೋಶ ಹೊರಹಾಕಿದರು.
.VIDEO | ಲಂಡನ್: ಭಾರತೀಯರನ್ನು ಉದ್ದೇಶಿಸಿ ಕತ್ತು ಸೀಳುತ್ತೇವೆ ಎಂದ ಪಾಕ್ ಅಧಿಕಾರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.