ಶ್ರೀನಗರ: ಪಹಲ್ಗಾಮ್ ದಾಳಿ ಬಳಿಕ ನಿಷ್ಕ್ರಿಯಗೊಂಡಿದ್ದ ಸ್ಯಾಟ್ಲೈಟ್ ಫೋನ್ಗಳು 2 ದಿನಗಳ ಹಿಂದೆ ಆ್ಯಕ್ಟಿವ್ ಆಗಿದ್ದವು. ಇದು 'ಆಪರೇಷನ್ ಮಹಾದೇವ' ಕಾರ್ಯಾಚರಣೆಗೆ ನೆರವಾಗಿದೆ ಎಂದು ವರದಿಯಾಗಿದೆ.

ದಾಳಿಕೋರರು ಬಳಸಿದ್ದಾರೆಂದು ಶಂಕಿಸಲಾದ ಹುವಾವೇ ಸ್ಯಾಟ್ಲೈಟ್ ಫೋನ್ಗಳು ಸುಮಾರು ಎರಡು ತಿಂಗಳಿಂದ ನಿಷ್ಕ್ರಿಯಗೊಂಡಿದ್ದವು. ಆದರೆ 2 ದಿನಗಳ ಹಿಂದೆ ಈ ಫೋನ್ಗಳು ದಿಢೀರ್ ಆನ್ ಆಗಿದ್ದವು.

ಫೋನ್ ಟ್ರ್ಯಾಕ್ ಮಾಡಿದಾಗ ಡಚಿಗಮ್ನಲ್ಲಿ ಫೋನ್ ಬಳಕೆಯಾಗಿರುವುದು ತಿಳಿದು ಬಂದಿತ್ತು. ಅಲ್ಲಿ ಜನವಸತಿ ಇಲ್ಲ. ಈ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಗುಪ್ತಚರ ವಿಭಾಗದ ಖಚಿತ ಮಾಹಿತಿ ಆಧರಿಸಿ, ಸೇನೆ ಇಂದು ಮುಂಜಾನೆ 'ಆಪರೇಷನ್ ಮಹಾದೇವ' ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿತ್ತು. ಈ ವೇಳೆ ನಡೆದ ಎನ್ಕೌಂಟರ್ನಲ್ಲಿ ಮೂವರು ಉಗ್ರರನ್ನು ಹತ್ಯೆಗೈಯಲಾಗಿದೆ ಎಂದು ವರದಿಯಾಗಿದೆ.

ಹತ್ಯೆಯಾದ ಉಗ್ರರಲ್ಲಿ ಓರ್ವ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಸುಲೇಮಾನ್ ಅಲಿಯಾಸ್ ಹಾಶಿಮ್ ಮೂಸಾ ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆತನ ಸಹಚರರಾದ ಯಾಸಿರ್ ಮತ್ತು ಅಬು ಹಮ್ಜಾ ಎಂದು ಗುರುತಿಸಲಾಗಿದೆ. ಈ ಮೂವರು ಪಾಕಿಸ್ತಾನಿ ಪ್ರಜೆಗಳು ಮತ್ತು ಎಲ್ಇಟಿ ಸದಸ್ಯರು ಎನ್ನಲಾಗಿದೆ.
.ಆಪರೇಷನ್ ಮಹಾದೇವ: ಪಹಲ್ಗಾಮ್ ದಾಳಿಕೋರರೆಂದು ಶಂಕಿಸಲಾದ ಮೂವರು ಭಯೋತ್ಪಾದಕರ ಹತ್ಯೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.